ನವದೆಹಲಿ: ನಿರ್ದಿಷ್ಟ ಯೋಜನೆಗಳ ಅಡಿಯಲ್ಲಿ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಜಾರಿಗೆ ತರಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.
ಇದನ್ನೂ ಓದಿ:ಬ್ರಿಟನ್ ನಲ್ಲಿ ಕೋವಿಡ್ 3ನೇ ಅಲೆ ಪ್ರಾರಂಭ; ಸತತ ಮೂರನೇ ದಿನ 10 ಸಾವಿರ ಪ್ರಕರಣ ಪತ್ತೆ
ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ನೀತಿ ಪ್ರಸ್ತಾಪದಲ್ಲಿದೆ. ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುತ್ತಿರುವುದರಿಂದ ಉದ್ದೇಶಿತ ಜನಸಂಖ್ಯಾ ನಿಯಂತ್ರಣ ನೀತಿ ಅಸ್ಸಾಂನ ಎಲ್ಲಾ ಯೋಜನೆಗಳಿಗೆ ತಕ್ಷಣ ಅನ್ವಯವಾಗುವುದಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ.
ನಾವು ಕೆಲವೊಂದು ಯೋಜನೆಗಳ ಮೇಲೆ ಈ ಎರಡು ಮಕ್ಕಳ ನೀತಿಯನ್ನು ಹೇರುವುದಿಲ್ಲ, ಉದಾಹರಣೆಗೆ ಶಾಲಾ, ಕಾಲೇಜುಗಳಲ್ಲಿನ ಉಚಿತ ಪ್ರವೇಶ ಅಥವಾ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿಯ ಮನೆಗಳನ್ನು ಪಡೆಯಲು ಈ ನೀತಿಯನ್ನು ಹೇರುವುದಿಲ್ಲ ಎಂದು ಹೇಳಿದರು.
ಆದರೆ ಕೆಲವು ಯೋಜನೆಗಳಲ್ಲಿ ಜಾರಿಗೊಳಿಸಬೇಕಾಗುತ್ತದೆ, ಒಂದು ವೇಳೆ ರಾಜ್ಯ ಸರ್ಕಾರ ವಸತಿ ಯೋಜನೆಯನ್ನು ಘೋಷಿಸಿದರೆ ಆಗ ಎರಡು ಮಕ್ಕಳ ನೀತಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ. ನಂತರ ಕ್ರಮೇಣವಾಗಿ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳಿಗೂ ಜನಸಂಖ್ಯೆ ನಿಯಂತ್ರಣ ಕಾಯ್ದೆ ಜಾರಿಯಾಗಲಿದೆ ಎಂದರು.