ಬಿಸ್ಪುರ: ಅಸ್ಸಾಂನ ಲಖಿಂಪುರ ಜಿಲ್ಲೆಯ ನೌಬೋಚಾ ಶಾಸಕ ಭರತ್ ಚಂದ್ರ ನಾರಾ ಅವರು ಸೋಮವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಲಖೀಂಪುರ ಕ್ಷೇತ್ರಕ್ಕೆ ಶಾಸಕ ಭರತ್ ಚಂದ್ರ ನರಹ್ ಅವರ ಪತ್ನಿ ರಾಣಿ ನಾರಾ ಅವರನ್ನು ಅಭ್ಯರ್ಥಿಯನ್ನಾಗಿ ನೇಮಿಸುತ್ತಾರೆ ಎಂದು ಲೆಕ್ಕಾಚಾರ ಹಾಕಲಾಗಿತ್ತು ಆದರೆ ಕಾಂಗ್ರೆಸ್ ಲಖೀಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಉದಯ್ ಶಂಕರ್ ಹಜಾರಿಕಾ ಅವರ ಹೆಸರನ್ನು ಘೋಷಣೆ ಮಾಡಿದೆ ಇದರಿಂದ ಬೇಸರಗೊಂಡ ಭರತ್ ನಾರಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಣಿ ನಾರಾ ಅವರು ಲಖಿಂಪುರ ಕ್ಷೇತ್ರದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಸಚಿವ ಸ್ಥಾನವನ್ನೂ ಕೂಡ ಅಲಂಕರಿಸಿದ್ದರು ಆದರೆ ಈ ಭಾರಿ ಟಿಕೆಟ್ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಲಖಿಂಪುರ ಕ್ಷೇತ್ರಕ್ಕೆ ಉದಯ್ ಶಂಕರ್ ಅವರ ಹೆಸರನ್ನು ಘೋಷಣೆ ಮಾಡಿದ ಎರಡು ದಿನಗಳ ಬಳಿಕ ಭರತ್ ಚಂದ್ರ ನಾರಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಭರತ್ ಅವರು ಅಸ್ಸಾಂನ ಕಾಂಗ್ರೆಸ್ ಮಾಧ್ಯಮ ಘಟಕದ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ: Muddebihal: ಪ್ರಶ್ನೆಪತ್ರಿಕೆ ವಿತರಣೆ ವಿಳಂಬ: ಅಗ್ನಿಶಾಮಕ ಸಿಬ್ಬಂದಿಯಿಂದಲೇ ನಕಲು ಪೂರೈಕೆ