Advertisement

ಹೊಸದಾಗಿ ರಚನೆಯಾದ ಜಿಲ್ಲೆಗಳನ್ನು ಮತ್ತೆ ವಿಲೀನ ಮಾಡಿದ ಅಸ್ಸಾಂ ಸರ್ಕಾರ

05:14 PM Dec 31, 2022 | Team Udayavani |

ಹೊಸದಿಲ್ಲಿ: ಅಸ್ಸಾಂ ಸರ್ಕಾರ ಶನಿವಾರ ನಾಲ್ಕು ಜಿಲ್ಲೆಗಳನ್ನು ಇತರ ನಾಲ್ಕು ಜಿಲ್ಲೆಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ. ಕೆಲವು ಗ್ರಾಮಗಳ ಆಡಳಿತ ವ್ಯಾಪ್ತಿಯನ್ನು ಬದಲಾಯಿಸಿದೆ.

Advertisement

ರಾಜ್ಯ ಸಚಿವ ಸಂಪುಟದ ಸಭೆಯ ನಂತರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನ ಹಿತಾಸಕ್ತಿ, ಅದರ ಸಮಾಜ ಮತ್ತು ಆಡಳಿತದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರವಾದ ಹೃದಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಇದು ಕೇವಲ “ತಾತ್ಕಾಲಿಕ” ಎಂದು ಹೇಳಿದ ಅವರು, ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ:ಬೂತ್ ವಿಜಯ ಅಭಿಯಾನದ ಮೂಲಕ ಬಿಜೆಪಿ ಚುನಾವಣಾ ರಣಕಹಳೆ: ಕುಯಿಲಾಡಿ ಸುರೇಶ್ ನಾಯಕ್

“ಬಿಸ್ವನಾಥ್ ಜಿಲ್ಲೆಯನ್ನು ಸೋನಿತ್‌ ಪುರದೊಂದಿಗೆ ವಿಲೀನಗೊಳಿಸಿದರೆ, ಹೋಜೈ ಅನ್ನು ನಾಗಾವ್‌ನೊಂದಿಗೆ ವಿಲೀನಗೊಳಿಸಲಾಗುವುದು, ಬಜಾಲಿಯನ್ನು ಬರ್ಪೇಟಾದೊಂದಿಗೆ ವಿಲೀನಗೊಳಿಸಲಾಗುವುದು ಮತ್ತು ತಾಮುಲ್‌ ಪುರವನ್ನು ಬಕ್ಸಾದೊಂದಿಗೆ ವಿಲೀನಗೊಳಿಸಲಾಗುವುದು” ಎಂದು ಅವರು ಹೇಳಿದರು.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಲವು ಗ್ರಾಮಗಳು ಮತ್ತು ಕೆಲವು ಪಟ್ಟಣಗಳ ಆಡಳಿತ ವ್ಯಾಪ್ತಿಯನ್ನೂ ಬದಲಾಯಿಸಲಾಗಿದೆ.

Advertisement

ವಿಲೀನಗೊಂಡ ಜಿಲ್ಲೆಗಳನ್ನು ಇತ್ತೀಚೆಗೆ ರಚಿಸಲಾಗಿದೆ ಮತ್ತು ಈ ಜಿಲ್ಲೆಗಳ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೆ ನಿರ್ಧಾರಗಳ ಹಿಂದಿನ ಮಹತ್ವವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ಶರ್ಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next