Advertisement

ಕೋವಿಡ್ 19 ಅಟ್ಟಹಾಸ: ಜೂನ್ 28ರಿಂದ ಗುವಾಹಟಿಯಲ್ಲಿ 2 ವಾರ ಸಂಪೂರ್ಣ ಲಾಕ್ ಡೌನ್

06:39 PM Jun 26, 2020 | Nagendra Trasi |

ನವದೆಹಲಿ: ಕೋವಿಡ್ 19 ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜೂನ್ 28ರಿಂದ ಜುಲೈ 12ರವರೆಗೆ ಗುವಾಹಟಿಯಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಲಿದೆ ಎಂದು ಅಸ್ಸಾಂ ಸರ್ಕಾರ ಶುಕ್ರವಾರ ಘೋಷಿಸಿದೆ.

Advertisement

ವಿಪತ್ತು ನಿರ್ವಹಣಾ ಕಾಯ್ದೆ 2005ರ ಅನ್ವಯ, ಅಸ್ಸಾಂ ಸರ್ಕಾರ ಗುವಾಹಟಿಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.

ರಾಜ್ಯ ಆರೋಗ್ಯ ಖಾತೆ ಸಚಿವ ಹಿಮಂತ್ ಬಿಸ್ವಾ ಸರ್ಮಾ,ಇದೇ ಸಮಯದಲ್ಲಿ ರಾಜ್ಯದ ಉಳಿದ ಕಡೆ ವಾರದ ಲಾಕ್ ಡೌನ್ ಹೇರಲಾಗುವುದು ಎಂದು ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ವರದಿ ಪ್ರಕಾರ, ಕಾಮ್ ರೂಪ್ ಮೆಟ್ರೋಪಾಲಿಟನ್ ನಲ್ಲಿ ಕೋವಿಡ್ 19 ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರದಿದ್ದು, ಇದರಿಂದ ಸಾರ್ವಜನಿಕ ಆರೋಗ್ಯ ಮತ್ತು ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದ್ದು, ಈ ನಿಟ್ಟಿನಲ್ಲಿ ಲಾಕ್ ಡೌನ್ ಅನಿವಾರ್ಯ ಎಂದು ತಿಳಿಸಿರುವುದಾಗಿ ಬಿಸ್ವಾ ಹೇಳಿದರು.

ಗುವಾಹಟಿಯಲ್ಲಿ ಈ ಸಮಯದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು ಬಂದ್ ಆಗಲಿದ್ದು, ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗುವುದು. ಯಾವುದೇ ಹೋಟೆಲ್, ವಾಣಿಜ್ಯ ವ್ಯವಹಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next