ಅಸ್ಸಾಂ: 9ನೇ ತರಗತಿಯ ವಿದ್ಯಾರ್ಥಿಗಳಿಗೆ 3.78 ಲಕ್ಷ ಸೈಕಲ್‌ಗಳನ್ನು ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ 60% ಕ್ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕೂಟರ್‌ಗಳನ್ನು ಒದಗಿಸುವ ನೀತಿಯನ್ನು ಅಸ್ಸಾಂ ಕ್ಯಾಬಿನೆಟ್ ಅನುಮೋದಿಸಿದೆ. ಜುಲೈ 5ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಸರ್ಕಾರಿ ಮತ್ತು ಪ್ರಾಂತೀಯ ಶಾಲೆಗಳಲ್ಲಿ ಓದುತ್ತಿರುವ 9ನೇ ತರಗತಿಯ 3.78 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆಗೆ ಅನುಮೋದನೆ ನೀಡಿದ್ದು ಇದರೊಂದಿಗೆ ಪಿಯಿಸಿ ಪರೀಕ್ಷೆಯಲ್ಲಿ ಶೇಕಡಾ 60 % ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು ಹಾಗೂ 75% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡಲು ಅನುಮೋದನೆ ನೀಡಿದ್ದು ಇದಕ್ಕಾಗಿ ಸರಕಾರ 167 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಪ್ರವಾಸೋದ್ಯಮ ಸಚಿವ ಜಯಂತ ಮಲ್ಲ ಹೇಳಿದ್ದಾರೆ.
ಮುಂದಿನ ವರ್ಷದಿಂದ ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಪಿಯುಸಿಯಲ್ಲಿ 75% ಗಿಂತ ಹೆಚ್ಚು ಅಂಕ ಪಡೆದವರು ಸ್ಕೂಟರ್ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ.
ಈ ನಿರ್ಧಾರವು ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸಲು ಮತ್ತು ರಾಜ್ಯದ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ವೃತ್ತಿಪರ ಕೋರ್ಸ್‌ಗಳಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಇತರ ಹಿಂದುಳಿದ ವರ್ಗಗಳ (ಎಂಒಬಿಸಿ) ಸೀಟುಗಳ ಮೀಸಲಾತಿಯನ್ನು 15% ರಿಂದ 27% ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಅನುಮೋದಿಸಿದೆ.
ಇದನ್ನೂ ಓದಿ: India ಸಂಬಂಧ ಕುರಿತು ಹೇಳಿಕೆ ವಿವಾದ; ನೇಪಾಳ ಪ್ರಧಾನಿ ರಾಜೀನಾಮೆಗೆ ಒತ್ತಡ