Advertisement
ಶುಕ್ರವಾರ ಮತ್ತೆ ಮೂವರು ಮಳೆಯಿಂದಾಗಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಮಳೆ ಮತ್ತು ಭೂಕುಸಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ. ಇನ್ನೂ 14 ಜಿಲ್ಲೆಗಳ 620 ಗ್ರಾಮಗಳು ಮತ್ತು 28 ನಗರಗಳು ಜಲಾವೃತವಾಗಿದ್ದು, 8.88 ಲಕ್ಷಕ್ಕೂ ಅಧಿಕ ಜನರ ಜೀವನ ಸಂಕಷ್ಟದಲ್ಲಿಯೇ ಇದೆ ಎಂದು ಸರ್ಕಾರ ತಿಳಿಸಿದೆ. ರಾಷ್ಟ್ರೀಯ ವಿಪತ್ತು ಪರಿಹಾರದ ಮೊತ್ತವನ್ನು ಆದಷ್ಟು ಬೇಗವೇ ರಾಜ್ಯಕ್ಕೆ ಬಿಡುಗಡೆ ಮಾಡಬೇಕೆಂದು ಸಿಎಂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಶನಿವಾರವೂ ಮಳೆಯ ಅಬ್ಬರ ಜೋರಾಗಿತ್ತು. ಮುಂಬೈ, ಥಾಣೆ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ಇನ್ನೂ ಐದು ದಿನಗಳ ಕಾಲ ಹೆಚ್ಚು ಮಳೆ ಸಾಧ್ಯತೆಯಿದೆ ಎಂದು ಮುಂಬೈ ಪ್ರಾದೇಶಿಕ ಹವಾಮಾನ ಕಚೇರಿ ಎಚ್ಚರಿಸಿದೆ. ಮುಂಬೈ ಮತ್ತು ಥಾಣೆಗೆ ಭಾನುವಾರಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತೆಲಂಗಾಣದ ಹೈದರಾಬಾದ್ ಮತ್ತು ಹಲವು ಜಿಲ್ಲೆಗಳಲ್ಲಿಯೂ ಶನಿವಾರ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ.