Advertisement

ಆಧುನಿಕ ‘ವಸುದೇವ’!

09:13 AM Jul 20, 2019 | sudhir |

ಅಸ್ಸಾಂನಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಹಲವಾರು ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಕಾಣಿಸಿಕೊಂಡಿದೆ. ಈ ಭಾಗದಲ್ಲಿರುವ ಗ್ರಾಮಗಳಿಗೇ ಗ್ರಾಮಗಳೇ ಮುಳುಗಡೆಯಾಗಿವೆ. ಒಂದು ಕಡೆಯಲ್ಲಿ ಜಗತ್ಪಸ್ರಿದ್ಧ ಕಾಂಜಿರಂಗ ಸಹಿತ ಹಲವಾರು ಉದ್ಯಾನವನಗಳು ಮುಳುಗಡೆಯಾಗಿ ಪ್ರಾಣಿ ಸಂಕುಲ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇನ್ನೊಂದೆಡೆಯಲ್ಲಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಗಳಲ್ಲಿನ ಗ್ರಾಮಸ್ಥರು ಉಟ್ಟಬಟ್ಟಯಲ್ಲೇ ತಮ್ಮ ಮನೆ, ಜಮೀನುಗಳನ್ನು ತೊರೆದು ಸಾಕುಪ್ರಾಣಿಗಳ ಸಹಿತ ಸುರಕ್ಷಿತ ಸ್ಥಳಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.

Advertisement


ನಿನ್ನೆಯಷ್ಟೇ ಅಭಯಾರಣ್ಯದಿಂದ ತಪ್ಪಿಸಿಕೊಂಡು ಬಂದಿದ್ದ ಹುಲಿಯೊಂದು ಸಮೀಪದ ಮನೆಯ ಕೋಣೆಯೊಳಗೆ ನುಗ್ಗಿ ಮಂಚದ ಮೇಲೆ ಮಲಗಿದ್ದ ಚಿತ್ರವೊಂದು ‘ವೈಲ್ಡ್ ಲೈಫ್ ಆಫ್ ಇಂಡಿಯಾ’ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಗೊಂಡು ಎಲ್ಲರ ಗಮನ ಸೆಳೆದಿತ್ತು.

ಇವತ್ತು ಇನ್ನೊಂದು ಚಿತ್ರ ಆ ಭಾಗದ ಪ್ರವಾಹ ಪರಿಸ್ಥಿತಿಗೆ ನಿದರ್ಶನವೆಂಬಂತೆ ತೋರುತ್ತಿದೆ. ವ್ಯಕ್ತಿಯೊಬ್ಬರು ಒಂದು ಮಗುವನ್ನು ಬಟ್ಟೆ ಹಾಸಿದ ಬೆತ್ತದ ಬುಟ್ಟಿಯಲ್ಲಿ ಇರಿಸಿಕೊಂಡು ಎದೆಮಟ್ಟದ ನೆರೆನೀರಿನಲ್ಲಿ ಸುರಕ್ಷಿತ ಸ್ಥಳದತ್ತ ಸಾಗುತ್ತಿರುವ ಚಿತ್ರ ಮನಕಲುಕುವಂತಿದೆ.


ಅಂದು ದ್ವಾಪರ ಯುಗದಲ್ಲಿ ಕಂಸನ ಸೆರೆಯಲ್ಲಿ ಜನಿಸಿದ ತನ್ನ ಮಗುವನ್ನು ಶ್ರೀ ಕೃಷ್ಣನ ತಂದೆಯಾದ ವಸುದೇವ ರಾತೋರಾತ್ರಿ ಸುರಿಯುತ್ತಿದ್ದ ಜಡಿಮಳೆಯನ್ನೂ ಲೆಕ್ಕಿಸದೇ ಬುಟ್ಟಿಯಲ್ಲಿರಿಸಿ ತಲೆಮೇಲೆ ಇರಿಸಿಕೊಂಡು ಉಕ್ಕಿಹರಿಯುತ್ತಿದ್ದ ಯಮುನಾ ನದಿಯನ್ನು ದಾಟಿ ದ್ವಾರಕೆಯತ್ತ ನಡೆದ ಎಂಬ ಪುರಾಣದ ಕಥೆ ಈ ಘಟನೆಯನ್ನು ನೋಡಿದಾಗ ಮತ್ತೆ ನೆನಪಾಗುತ್ತಿದೆ.

ಆದರೆ ಬುಟ್ಟಿಯಲ್ಲಿ ತಣ್ಣಗೆ ಕುಳಿತ ಆ ಮಗುವಿಗೂ ಮತ್ತು ಅದನ್ನು ತಲೆ ಮೇಲೆ ಹೊತ್ತುಕೊಂಡು ಪ್ರವಾಹದ ನೀರಲ್ಲಿ ನಡೆಯುತ್ತಿರುವ ವ್ಯಕ್ತಿಗೂ ಇರುವ ಸಂಬಂಧದ ಕುರಿತಾಗಿ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಏನೇ ಆದರೂ ಬುಟ್ಟಿಯಲ್ಲಿ ಕುಳಿತಿರುವ ಮಗು ಕೃಷ್ಣನಂತೆಯೂ ಮತ್ತದನ್ನು ತಲೆ ಮೇಲೆ ಹೊತ್ತುಕೊಂಡು ನೀರಿನಲ್ಲಿ ಸಾಗುತ್ತಿರುವ ಆ ವ್ಯಕ್ತಿ ಈ ಕಾಲದ ವಸುದೇವನಂತೆಯೂ ನಮಗೆ ಕಂಡಲ್ಲಿ ಆಶ್ಚರ್ಯವಿಲ್ಲವಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next