Advertisement

ಜನ ಆಶೀರ್ವದಿಸಿದ್ದಾರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ : ಅಸ್ಸಾಂ ಸಿಎಂ ಸೋನೊವಾಲ್

03:13 PM May 02, 2021 | Team Udayavani |

ಅಸ್ಸಾಂ : ಅಸ್ಸಾಂನಲ್ಲಿ ಎನ್‌ ಡಿಎ ಮೈತ್ರಿಕೂಟ 77 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಕಾಂಗ್ರೆಸ್‌ ಮೈತ್ರಿಕೂಟ 49 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.  ಪಕ್ಷದ ಪ್ರಕಾರ ಹೇಳುವುದಾದರೆ ಬಿಜೆಪಿ 62, ಅಸ್ಸಾಂ ಗಣಪರಿಷತ್‌ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

Advertisement

ಹೆಚ್ಚು ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಅಸ್ಸಾಂನಲ್ಲಿ ಮತ್ತೆ ಅಧಿಕಾರದತ್ತ ಎನ್‌ ಡಿ ಎ ಸಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಜನರು ಮತ್ತೆ ನಮಗೆ ಆಶೀರ್ವದಿಸಿದ್ದಾರೆ. ಅಸ್ಸಾಂ ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದ್ದಾರೆ.

ಒಟ್ಟು ಅಸ್ಸಾ ರಾಜ್ಯದಲ್ಲಿ 126 ಕ್ಷೇತ್ರಗಳಿಗೆ ವಿಧಾನ ಸಭಾ ಚುನಾವಣೆ ನಡೆದಿತ್ತು. ಈ ರಾಜ್ಯದಲ್ಲಿ ಎನ್ ಡಿ ಎ ಮತ್ತು ಯುಪಿಎ ಮೈತ್ರಿ ಕೂಟಗಳಿಗೆ ಭಾರೀ ಪೈಪೋಟಿ ಇದೆ. ಅಂತಿಮ ಫಲಿತಾಂಶ ಬಂದ ಮೇಲೆ ಯಾರಿಗೆ ಜಯ ಎಂಬುದನ್ನು ತಿಳಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next