ಗುವಾಹಟಿ : ಮದುವೆ ಕಾರ್ಯಕ್ರಮಕ್ಕೆ ಮದ್ಯದ ಅಮಲಿನಲ್ಲಿ ಬಂದ ವ್ಯಕ್ತಿಯೊಬ್ಬ ಅನಾವಶ್ಯಕವಾಗಿ ಅಡುಗೆ ತಯಾರಕರ ಜೊತೆ ಗಲಾಟೆ ಮಾಡಿ ಚೂರಿಯಿಂದ ಇರಿದು ಓರ್ವನನ್ನು ಕೊಂದು ಇಬ್ಬರು ಗಾಯಗೊಂಡಿರುವ ಘಟನೆ ಅಸ್ಸಾಂ ನ ಟಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಸುನಿಲ್ ಮೊಂಡೋಲ್ ಸಾವನ್ನಪ್ಪಿದ್ದ ದುರ್ದೈವಿ, ಬಿಮಲ್ ಗೊಗೊಯ್ ಮತ್ತು ಮೋನುಜ್ ಶರ್ಮಾ ಗಾಯಾಳುಗಳು.
ಘಟನೆ ವಿವರ : ಅಸ್ಸಾಂ ನ ಟಿನ್ಸುಕಿಯಾ ಜಿಲ್ಲೆಯಲ್ಲಿರುವ ಹೋಟೆಲ್ ಒಂದರಲ್ಲಿ ಮದುವೆ ಕಾರ್ಯಕ್ರಮ ನಡೆಯುತಿತ್ತು ಈ ವೇಳೆ ಮದ್ಯ ಸೇವನೆ ಮಾಡಿದ ವ್ಯಕ್ತಿಯೊಬ್ಬ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಾನೆ, ಬಂದವನು ಅಡುಗೆ ಕೋಣೆಗೆ ಹೋಗಿ ಅಡುಗೆ ತಯಾರಕರಾದ ಸುನಿಲ್ ಮೊಂಡೋಲ್,ಬಿಮಲ್ ಗೊಗೊಯ್ ಮತ್ತು ಮೋನುಜ್ ಶರ್ಮಾ ಅವರೊಂದಿಗೆ ಅನಾವಶ್ಯಕ ಜಗಳವಾಡಿದ್ದಾನೆ ಈ ವೇಳೆ ಮಾತಿಗೆ ಮಾತು ಬೆಳೆದು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಅಡುಗೆ ಕೋಣೆಯಲ್ಲಿದ್ದ ಚೂರಿಯಿಂದ ಸುನಿಲ್ ಮೊಂಡೋಲ್ ಹೊಟ್ಟೆಗೆ ಇರಿದಿದ್ದಾನೆ ಈ ವೇಳೆ ತಡೆಯಲು ಬಂದ ಬಿಮಲ್ ಗೊಗೊಯ್ ಮತ್ತು ಮೋನುಜ್ ಶರ್ಮಾ ಅವರಿಗೂ ಗಾಯಗಳಾಗಿವೆ, ಗಂಭೀರ ಗಾಯಗೊಂಡ ಸುನಿಲ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ದಾರಿಮದ್ಯೆ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಡ್ರಗ್ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ರಿಲೀಫ್, ಜಾಮೀನು ಮಂಜೂರು
ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ, ಅಲ್ಲದೆ ಹೋಟೆಲ್ ನಲ್ಲಿ ಪರಿಶೀಲಿಸಿದ ವೇಳೆ ಹಲವು ಮದ್ಯದ ಬಾಟಲಿಗಳು ಸಿಕ್ಕಿದ್ದು ಘಟನೆ ಕುರಿತು ಶೀಘ್ರ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಸುನಿಲ್ ಮೊಂಡೋಲ್ ಮೂಲತಃ ಅಸ್ಸಾಂ ನವನಾಗಿದ್ದು ದಿಬ್ರುಗರ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಹೆಂಡತಿ ಮತ್ತು ಮಗುವಿನ ಜೊತೆ ವಾಸವಾಗಿದ್ದ.