Advertisement

ಅಸ್ಸಾಂ ವಶ ಕೇಂದ್ರದಲ್ಲಿ ಮತ್ತೋರ್ವ ಸಾವು

10:05 AM Jan 07, 2020 | Team Udayavani |

ಗುವಾಹಟಿ: ಅಸ್ಸಾಂನ ವಶ ಕೇಂದ್ರದಲ್ಲಿದ್ದ ವಿದೇಶಿ ಪ್ರಜೆ ಎನ್ನಲಾದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಕೇಂದ್ರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ತಲುಪಿದೆ.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ನರೇಶ್‌ ಕೊಚ್‌ (50) ಮೃತಪಟ್ಟವರು. ಇಲ್ಲಿನ ನ್ಯಾಯಾಧಿಕರಣವು 2017ರಲ್ಲಿ ಇವರನ್ನು ವಿದೇಶಿ ಪ್ರಜೆ ಎಂದು ಘೋಷಿಸಿತ್ತು. ಅನಂತರ ಅವರನ್ನು ವಶ ಕೇಂದ್ರಕ್ಕೆ ಕಳುಹಿಸಲಾಗಿತ್ತು.

‘ನಾವು 1964ರಲ್ಲಿ ಪೂರ್ವ ಪಾಕಿಸ್ಥಾನದಿಂದ ಅಸ್ಸಾಂಗೆ ವಲಸೆ ಬಂದಿದ್ದೆವು. ಹೀಗಿರುವಾಗ ನಾವು ಹೇಗೆ ವಿದೇಶಿಯರಾಗುತ್ತೇವೆ’ ಎಂದು ಆತನ ಪತ್ನಿ ಜಿಮಿ ಪ್ರಶ್ನಿಸಿದ್ದಾರೆ. ಪತಿಯ ಅಂತ್ಯಕ್ರಿಯೆಗೆ ಪೊಲೀಸರ ಆರ್ಥಿಕ ನೆರವನ್ನು ಈ ಕುಟುಂಬ ನಿರಾಕರಿಸಿದೆ. ಅಸ್ಸಾಂನ ಆರು ವಶ ಕೇಂದ್ರದಲ್ಲಿ ಒಟ್ಟು ಒಂದು ಸಾವಿರ ಮಂದಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next