Advertisement

ಮಾದಕ ವಸ್ತುಗಳಿಗೆ ಕಿಚ್ಚಿಟ್ಟ ಅಸ್ಸಾಂ ಸಿಎಂ ಹಿಮಂತ

01:53 AM Jul 19, 2021 | Team Udayavani |

ದಿಸ್‌ಪುರ: ಅಸ್ಸಾಂನ ಮಧ್ಯಭಾಗದಲ್ಲಿರುವ ದಿಂಫ‌ು, ಗೋಲಾ ಭಾಟ್‌, ಬರ್ಹಾಂಪುರ್‌, ನಾಗಾಂವ್‌, ಹಜೋಜಿಯಲ್ಲಿ ನಡೆದ ಅಸ್ಸಾಂ ಪೊಲೀಸರು ನಡೆಸಿದ ನಾಲ್ಕು ಪ್ರತ್ಯೇಕ ದಾಳಿಗಳಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Advertisement

ರವಿವಾರ, ದಾಳಿ ನಡೆದ ಆ ನಾಲ್ಕೂ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಜಪ್ತಿ ಮಾಡಲಾಗಿದ್ದ ಮಾದಕ ವಸ್ತುಗಳ ದಾಸ್ತಾನಿಗೆ ಬೆಂಕಿಯಿಟ್ಟರು. ನಾಗಾಂವ್‌ನಲ್ಲಿ ಅಕ್ರಮ ಮದ್ಯದ ಬಾಟಲಿಗಳ ಮೇಲೆ ತಾವೇ ರೋಡ್‌ರೋಲರ್‌ ಚಲಾಯಿಸಿ ಧ್ವಂಸಗೊಳಿಸಿದರು.

ಬರ್ಹಾಂಪುರದಲ್ಲಿದ್ದ ದಾಸ್ತಾನಿಗೆ ಅಗ್ನಿಸ್ಪರ್ಶ ಮಾಡಿದ ಅನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಮಾದಕ ವಸ್ತುಗಳು ಯುವಜನರ ಭವಿಷ್ಯಕ್ಕೆ ಮಾರಕ.

ಇಂಥ ನಿಷೇಧಿತ ಪದಾರ್ಥಗಳ ಮಾರಾಟ ಹಾಗೂ ಸರಬರಾಜಿನಲ್ಲಿ ನಿರತರಾದವರ ವಿರುದ್ಧ ಉಗ್ರ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next