Advertisement

INDIA; ಡುಪ್ಲಿಕೇಟ್ ‘ಗಾಂಧಿ’ ಎಂಬ ಉಪನಾಮವನ್ನು ರಾಹುಲ್ ಬಿಡಬೇಕು: ಹಿಮಂತ ಬಿಸ್ವಾ

08:52 PM Sep 10, 2023 | Vishnudas Patil |

ಗುವಾಹಟಿ: “ಮತ ಸಂಗ್ರಹಿಸುವ ಸಮಯ ಬಂದಾಗ, ಕಾಂಗ್ರೆಸ್‌ನವರು ಭಾರತ್ ಜೋಡೋ ಯಾತ್ರೆ ಮಾಡುತ್ತಾರೆ, ಕರ್ನಾಟಕ ಚುನಾವಣೆಗಳು ಮುಗಿದಾಗ ಅದು ಇಂಡಿಯಾ ವಾಗಿ ಬದಲಾಯಿತು” ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಲೇವಡಿ ಮಾಡಿದ್ದಾರೆ.

Advertisement

‘ಈಗ ನಾವು ಇಂಡಿಯಾ ಆಗಿದ್ದೇವೆ ಎಂದು ಅವರು ಹೇಳುತ್ತಾರೆ. ನಾನು ಅವರಿಗೆ ನಕಲಿ ನಾಯಕರು ಎಂದು ಹೇಳುತ್ತೇನೆ. ಮೊದಲು ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆಮೇಲೆ ಗಾಂಧಿ ಉಪನಾಮ ಹಿಡಿದು ನೀವೆಲ್ಲರೂ ಡುಪ್ಲಿಕೇಟ್ ಗಾಂಧಿಗಳಾದಿರಿ’ ಎಂದು ಕಿಡಿ ಕಾರಿದರು.

‘ಭಾರತದ ಮೊದಲ ಹಗರಣ ಈ ‘ಟೈಟಲ್’ ಹಗರಣ.ದೇಶವನ್ನು ದೋಚಿ ಇಂಡಿಯಾವಾಗಲು ಬಯಸುತ್ತಿದ್ದಾರೆ. ನಾಳೆ ಒಬ್ಬ ಡಕಾಯಿತ ಗಾಂಧಿ ಉಪನಾಮವನ್ನು ತೆಗೆದುಕೊಂಡರೆ ಅವನು ಸಾಧು ಆಗುತ್ತಾನೆಯೇ?’ ಎಂದು ಪ್ರಶ್ನಿಸಿದರು.

‘ಇಂಡಿಯಾ ಎಂಬ ಹೆಸರನ್ನು ತೆಗೆದುಕೊಳ್ಳುವ ಮೂಲಕ ನೀವು ಪಾಪ ಮಾಡಿದ್ದೀರಿ, ಏಕೆಂದರೆ ನೀವು ಇಂಡಿಯಾಕ್ಕೆ ಕೀರ್ತಿ ತರುವ ಯಾವುದನ್ನೂ ಮಾಡಲಿಲ್ಲ. ನಿಮಗೆ ‘ಇಂಡಿಯಾ’ ಎಂಬ ಹೆಸರನ್ನು ತೆಗೆದುಕೊಳ್ಳುವ ಹಕ್ಕೂ ಇಲ್ಲ’ ಎಂದರು.

‘ಭಾರತ್’ ಎಂಬ ಹೆಸರನ್ನು ತೆಗೆದುಕೊಳ್ಳಲಿ, ಆದರೆ ನನ್ನದೊಂದು ವಿನಮ್ರ ವಿನಂತಿ, ರಾಹುಲ್ ಗಾಂಧಿಯವರಾದರೂ ‘ಗಾಂಧಿ’ ಎಂಬ ಉಪನಾಮವನ್ನು ಬಿಡಬೇಕು. ಅದೂ ಡುಪ್ಲಿಕೇಟ್ ಶೀರ್ಷಿಕೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next