ಲುಮ್ಡಿಂಗ್ : ಅಸ್ಸಾಂನ ಬಿಜೆಪಿ ಶಾಸಕ ಸಿಬು ಮಿಶ್ರಾ ಅವರು ಮೇ 18 ರಂದು ಪ್ರವಾಹ ರಕ್ಷಣಾ ಕಾರ್ಯಕರ್ತರ ಬೆನ್ನಿನ ಮೇಲೆ ದೋಣಿಗೆ ಪಿಗ್ಗಿಬ್ಯಾಕ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ.
Advertisement
ಅವರು ಹೊಜೈ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ವೇಳೆ ರಕ್ಷಣಾ ಕಾರ್ಯಕರ್ತನೊಬ್ಬರ ಬೆನ್ನಿನ ಮೇಲೆ ಸವಾರಿ ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಸೇರಿ ವಿಪಕ್ಷಗಳು ಶಾಸಕರದ್ದು ಬಾಲಿಶ ವರ್ತನೆ ಎಂದು ಟೀಕಿಸಿವೆ.