ನವದೆಹಲಿ: ತೀವ್ರ ಕುತೂಹಲ ಹುಟ್ಟುಹಾಕಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಿ ಹೊರಬೀಳಲಿದ್ದು, ಏತನ್ಮಧ್ಯೆ ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವತ್ತ ದಾಪುಗಾಲಿಟ್ಟಿದೆ.
ಇದನ್ನೂ ಓದಿ:ಬಸವಕಲ್ಯಾಣ ಉಪಕದನ : ಮೂರನೇ ಸುತ್ತಿನಲ್ಲು ಕಮಲ ಕಿಲಕಿಲ, ಶರಣು ಸಲಗರ ಮುನ್ನಡೆ
ಬಿಜೆಪಿ 69 ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಪಕ್ಷ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಎಜೆಪಿ ಒಂದು ಸ್ಥಾನದಲ್ಲಿ, ಪಕ್ಷೇತರರು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು 64 ಸ್ಥಾನಗಳ ಅಗತ್ಯವಿದೆ. ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಇದೇ ಮುನ್ನಡೆ ಕಾಯ್ದುಕೊಂಡರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಇದೆ.
2016ರಲ್ಲಿ ಭಾರತೀಯ ಜನತಾ ಪಕ್ಷ 60 ಸ್ಥಾನ, ಕಾಂಗ್ರೆಸ್ ಪಕ್ಷ 26 ಸ್ಥಾನಗಳಲ್ಲಿ, ಎಐಯುಡಿಎಫ್ 13 ಸ್ಥಾನಗಳಲ್ಲಿ ಅಸ್ಸೊಂ ಗಣ ಪರಿಷತ್ 14, ಬಿಪಿಎಫ್ 12 ಸ್ಥಾನಗಳಲ್ಲಿ ಜಯ ಗಳಿಸಿತ್ತು. 2016ರಲ್ಲಿ ಬಿಜೆಪಿ ಮೈತ್ರಿಕೂಟ ಅಸ್ಸಾಂನಲ್ಲಿ ಅಧಿಕಾರದ ಗದ್ದುಗೆ ಏರಿತ್ತು.