ಯಾವುದೇ ಚಿತ್ರರಂಗವಿರಲಿ, ಅಲ್ಲಿ ಎಲ್ಲಾ ಭಾಷೆಯ ನಟ, ನಟಿಯರ ಎಂಟ್ರಿ ಇದ್ದೇ ಇರುತ್ತೆ. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಹೊರತಲ್ಲ. ಈಗಾಗಲೇ ಕನ್ನಡಕ್ಕೆ ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್‌ನಿಂದಲೂ ನಟಿಯರು ಕಾಲಿಟ್ಟಾಗಿದೆ. ಅದರೊಂದಿಗೆ ವಾರಣಾಸಿ, ಕಾಶ್ಮೀರ, ಒಡಿಸ್ಸಾ, ಕೊಲ್ಕತ್ತಾ ಹೀಗೆ ಇನ್ನಿತರೆ ರಾಜ್ಯಗಳಿಂದಲೂ ನಟಿಯರು ಬಂದಾಗಿದೆ. ಆ ಸಾಲಿಗೆ ಈಗ ಅಸ್ಸಾಂ ಬೆಡಗಿಯೊಬ್ಬಳ ಆಗಮನವಾಗಿದೆ. ಹೀಗೆ ಅಸ್ಸಾಂನಿಂದ ಬಂದ ನಟಿ ಖಯಾದು ಲೋಹರ್. ಅದು “ಮುಗಿಲ್ ಪೇಟೆ’ ಚಿತ್ರದ ಮೂಲಕ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಖಯಾದು ಅವರಿಗೆ ಸಿನಿಮಾ ಹೊಸದಲ್ಲ. ಇದಕ್ಕೂ ಮುನ್ನ ಅವರು ಮರಾಠಿ ಭಾಷೆಯ ಚಿತ್ರವೊಂದರಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿರುವುದರಿಂದ ಖಯಾದು ಲೋಹರ್‌ಗೆ ಖುಷಿ ¨ ಖಯಾದು ಅವರು ತಮ್ಮ ಕನ್ನಡದ ಮೊದಲ ಚಿತ್ರದ ಬಗ್ಗೆ ಹೇಳಿಕೊಳ್ಳುವುದು ಹೀಗೆ.”ನನಗೆ ಇದು ಮೊದಲ ಕನ್ನಡ ಸಿನಿಮಾ. ಕನ್ನಡ ಭಾಷೆ ನನಗಿಷ್ಟ. ಆದರೆ, ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದರೆ, ಮಾತನಾಡುವ ಭಾಷೆ ನನಗೆ ಅರ್ಥವಾಗುತ್ತೆ. ಇದೇ ಮೊದಲ ಸಲ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹಾಗಾಗಿ, ನಾನು ಕನ್ನಡ ಭಾಷೆ ಕಲಿಯುವ ಆಸಕ್ತಿ ಹೊಂದಿದ್ದು, ಕ್ಯಾಮೆರಾ ಮುಂದೆ ನಿಲ್ಲುವ ಮೊದಲೇ ನಾನು ಕನ್ನಡ ಭಾಷೆಯ ಬಗ್ಗೆ ತಿಳಿದುಕೊಂಡಿದ್ದೇನೆ. ನಿರ್ದೇಶಕರು ಕನ್ನಡ ಭಾಷೆ ಕಲಿಯಲು ತರಬೇತಿ ಕ್ಲಾಸ್‌ಗೆ ಕಳುಹಿಸಿದ್ದಾರೆ ಕೂಡಾ’ ಎನ್ನುತ್ತಾರೆ.
ಖಯಾದು ಲೋಹರ್ ಹಿಂದಿ ರಂಗಭೂಮಿಯಲ್ಲಿ ಒಂದಷ್ಟು ತರಬೇತಿ ಪಡೆದು ಬಂದಿದ್ದಾರೆ. ಅವರು ಸದ್ಯಕ್ಕೆ ಪೂನಾದಲ್ಲಿ ವಾಸವಾಗಿದ್ದಾರೆ. ಓದುವ ಸಂದರ್ಭದಲ್ಲೇ ಅವರಿಗೆ ಮರಾಠಿ ಚಿತ್ರವೊಂದಕ್ಕೆ ನಟಿಸುವ ಅವಕಾಶ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಅಂದುಕೊಂಡ ಖಯಾದು ಅವರಿಗೆ, ಆಡಿಷನ್ ಮೂಲಕವೇ ಮರಾಠಿ ಸಿನಿಮಾದಲ್ಲಿ ನಟಿಸುವ ಅವಕಾಶ ಲಬಿಸಿದೆ.
ಇದನ್ನೂ ಓದಿ:ವರ್ಷದ ಹಿಂದೆ ಪುನೀತ್ ಗೆ ರಾಯರ ಸೂಚನೆ?; ವೈರಲ್ ವಿಡಿಯೋ ಗೆ ಮಂತ್ರಾಲಯ ಶ್ರೀಗಳ ಸ್ಪಷ್ಟನೆ
ಇನ್ನು, ಕನ್ನಡದ “ಮುಗಿಲ್ ಪೇಟೆ’ ಚಿತ್ರದಲ್ಲೂ ಸಹ ಆಡಿಷನ್ ಮೂಲಕವೇ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಗಾದರೆ, ಈ ಚಿತ್ರದಲ್ಲಿ ಅವರಿಗೆ ಸಿಕ್ಕ ಪಾತ್ರವೇನು? ಈ ಕುರಿತು ಹೇಳುವ ಖಯಾದು ಲೋಹರ್, “ಈ ಚಿತ್ರದಲ್ಲಿ ನನಗೆ ಬಬ್ಲಿ ಪಾತ್ರ ಸಿಕ್ಕಿದೆ. ತುಂಬಾ ಸ್ವತಂತ್ರವಾಗಿ ಓಡಾಡಿಕೊಂಡಿರುವ ಹುಡುಗಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದೇನೆ. ಸದಾ ನಾಯಕನ ಜೊತೆ ಜಗಳವಾಡುವಂತಹ ಪಾತ್ರ ನನ್ನದು. ಒಂದು ರೀತಿ ಚಾಲೆಂಜಿಂಗ್ ಪಾತ್ರ ನನ್ನ ಪಾಲಿಗೆ ದಕ್ಕಿದೆ. ನನಗೆ ಸೌತ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದೀಗ ಕನ್ನಡ ಚಿತ್ರರಂಗದ ಮೂಲಕ ಈಡೇರಿದೆ’ ಎಂದು ಖುಷಿಗೊಳ್ಳುತ್ತಾರೆ ಅವರು