Advertisement

ಕೇಳಿದ್ದು ಹಳತಾದರೂ ಕೊಟ್ಟದ್ದು ಹೊಸತು!

02:53 PM Apr 29, 2017 | |

ಉಡುಪಿ: ಹಳೆ ಬಟ್ಟೆ, ಮಕ್ಕಳ ಆಟಿಕೆಗಳನ್ನು ಎಸೆಯದೆ, ಸುಟ್ಟು ಪರಿಸರ ಮಾಲಿನ್ಯ ಮಾಡದೆ ಅಗತ್ಯವುಳ್ಳವರಿಗೆ ನೀಡಿ ಎಂಬ ಧ್ಯೇಯವಾಕ್ಯದಡಿ ಸೇವಾ ಕಾರ್ಯಮಾಡುವ ಕಾರ್ಕಳದ ಸುನಿಲ್‌ ಅವರ ಸುದ್ದಿಯನ್ನು “ಉದಯವಾಣಿ’ ಶುಕ್ರವಾರ ಪ್ರಕಟಿಸಿತ್ತು. ಆದರೆ ಕಾರ್ಕಳ ದರೆಗುಡ್ಡೆಯ ಅರ್ಚಕ ವೃತ್ತಿಯ ಗಜಾನನ ಭಟ್‌ ಅವರು ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಎಂದು ಹೇಳದೆ ಹೊಸ ನೂರು ಧೋತಿ, 20 ಸೀರೆಗಳನ್ನು ಸುನಿಲ್‌ ಅವರ ಪುಲ್ಕೇರಿಯ ಮನೆಗೇ ತಂದು ಕೊಟ್ಟರು. ಜನರ ಸ್ಪಂದನ ಹೇಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ.

Advertisement

ಅದೇ ರೀತಿ ಆದಿಉಡುಪಿಯ ಸದಾಶಿವ ಆಚಾರ್ಯರು ಸುಮಾರು 15 ಅಂಗಿಗಳನ್ನು ಮನೆಗೆ ತಂದು ಕೊಟ್ಟರು. ಹತ್ತಾರು ದೂರವಾಣಿಗಳು ರಿಂಗಣಿಸಿ ತಮ್ಮ ಕೊಡುಗೆಗಳನ್ನು ಕೊಡುವುದಾಗಿ ಭರವಸೆ ನೀಡಿದವು. ಅಕ್ಷಯತದಿಗೆಯಂದೇ ತಂದು ಕೊಟ್ಟರಲ್ಲಾ ಎಂದು ಸುನಿಲ್‌ ಅವರು ಆನೆಕೆರೆಯ ಕಾರ್ಮಿಕರ ಕಾಲನಿ, ಕಾರ್ಕಳ ಕುದುರೆಮುಖ ರಸ್ತೆಯಿಂದ 2.5 ಕಿ.ಮೀ. ಒಳಗೆ ಇರುವ ಸೂರಾಲು ಕೊರಗರ ಕಾಲನಿಗೆ ತೆರಳಿ ಅವುಗಳನ್ನು ವಿತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next