Advertisement

ಉಡುಗೊರೆ ಕಳುಹಿಸುವುದಾಗಿ ಹೇಳಿ 82,786 ರೂ. ವಂಚನೆ

10:04 PM Apr 25, 2023 | Team Udayavani |

ಮಂಗಳೂರು: ಉಡುಗೊರೆ ಕಳುಹಿಸುವುದಾಗಿ ಹೇಳಿ ಪ್ರೊಸೆಸಿಂಗ್‌ ಶುಲ್ಕದ ಹೆಸರಿನಲ್ಲಿ 82,746 ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ದೂರುದಾರ ವ್ಯಕ್ತಿಯ ವಾಟ್ಸ್‌ಆ್ಯಪ್‌ಗೆ ಅಪರಿಚಿತ ವ್ಯಕ್ತಿಗೆ ಫೆ. 7ರಂದು ಉಡುಗೊರೆ ಕಳುಹಿಸುವುದಾಗಿ ಸಂದೇಶ ಕಳುಹಿಸಿ ವಿಳಾಸ ಪಡೆದುಕೊಂಡಿದ್ದ. ಫೆ. 13ರಂದು ಮತ್ತೆ ಕರೆ ಮಾಡಿ ಉಡುಗೊರೆ ಕಳುಹಿಸಲಾಗುತ್ತದೆ,
ಅದಕ್ಕಾಗಿ ಪ್ರೊಸೆಸಿಂಗ್‌ ಶುಲ್ಕ ಪಾವತಿಸಬೇಕೆಂದು ತಿಳಿಸಿದ. ಇದನ್ನು ನಂಬಿದ ದೂರುದಾರ ವ್ಯಕ್ತಿ ಎರಡು ಬಾರಿ ತಲಾ 41,373 ರೂ.ಗಳಂತೆ ಒಟ್ಟು 82,746 ರೂ. ಪಾವತಿಸಿದ್ದಾರೆ. ಆದರೆ ಅವರಿಗೆ ಯಾವುದೇ ಉಡುಗೊರೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next