Advertisement

ಲಂಚಕ್ಕೆ ಬೇಡಿಕೆಯಿಟ್ಟರೆ ಎಸಿಬಿಗೆ ತಿಳಿಸಿ

07:28 AM Feb 13, 2019 | Team Udayavani |

ಸೋಮೇನಹಳ್ಳಿ(ಗುಡಿಬಂಡೆ ತಾ.): ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ಆಸೆ, ಆಮಿಷಗಳಿಗೆ ಒಳಗಾಗದೆ ಕಾನೂನು ಬದ್ಧವಾಗಿ ಕೆಲಸಗಳನ್ನು ಮಾಡಕೊಡಬೇಕೆಂದು ಮತ್ತು ಜನರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲೆದಾಡದಂತೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಸಿಬಿ ಪೊಲೀಸ್‌ ಉಪಾಧೀಕ್ಷಕ ವೆಂಕಟೇಶ್‌ ನಾಯ್ಡು ಸೂಚನೆ ನೀಡಿದರು.

Advertisement

ಸೋಮೇನಹಳ್ಳಿ ಶ್ರೀ ಗಂಗಾಭವಾನಿ ದೇವಾಲಯದ ಆವರಣದಲ್ಲಿ ಭ್ರಷ್ಟಾಚಾರ ನಿಗ್ರಹದಳದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಯಾವುದೇ ಕಚೇರಿಗಳಲ್ಲಿ ತಮ್ಮ ಕೆಲಸಗಳು ಸಮರ್ಪಕವಾಗಿ ಆಗದಿದ್ದರೆ, ಲಂಚಕ್ಕೆ ಬೇಡಿಕೆಯಿಟದಟರೆ ನೇರವಾಗಿ ಎಸಿಬಿಗೆ ಅರ್ಜಿ ನೀಡಬಹುದಾಗಿದೆ. 

ಕೆಲವರು ಸಾರ್ವಜನಿಕ ಸಭೆಯಲ್ಲಿ ಅರ್ಜಿ ನೀಡಲು ಹಿಂಜರಿಕೆಯಿದ್ದರೆ ನಮ್ಮ ಕಚೇರಿಗೆ ಬಂದು ಅರ್ಜಿ ಸಲ್ಲಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಸರ್ಕಾರದಿಂದ ಅನೇಕ ಹೊಸ ಹೊಸ ಯೋಜನೆಗಳು ಬರುತ್ತಿದೆ. ಜನರಿಗೆ ಮಾಹಿತಿ ಕೊರತೆಯಿಂದಾಗಿ ತಿಳಿಯದೆ ಆ ಯೋಜನೆಗಳು ಸದ್ಬಳಕೆ ಆಗುತ್ತಿಲ್ಲ.

ಇಲಾಖೆಯ ಅಧಿಕಾರಿಗಳು ಯಾವುದೇ ಯೋಜನೆಗಳು ಬಂದಾಗ ಕಚೇರಿ ಫಲಕದಲ್ಲಿ ನಮೂದಿಸುವುದು ಹಾಗೂ ಆಯಾ ಗ್ರಾಮಗಳಲ್ಲಿ ಜನರಿಗೆ ತಿಳಿಯುವಂತಹ ಮಾಹಿತಿ ನೀಡಿದಾಗ ಮಾತ್ರ ಜನರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next