Advertisement

ಆಹಾರೋತ್ಸವ

08:25 PM Oct 19, 2019 | mahesh |

ಸಸ್ಯಾಹಾರ ಪ್ರಿಯರಿಗೊಂದು ಸ್ವರ್ಗ ಸೃಷ್ಟಿಯಾಗಿದೆ. ಸಸ್ಯಾಹಾರದಲ್ಲಿ ಎಂತೆಂಥ ರುಚಿಕಟ್ಟಾದ ತಿನಿಸುಗಳಿವೆ ಅಂತ ತಿಳಿಯಲು, ಫ್ರಿಡಂ ಪಾರ್ಕ್‌ಗೆ ಬನ್ನಿ. ಅಲ್ಲಿ, ಏಷ್ಯಾದ ಅತಿದೊಡ್ಡ ಸಸ್ಯಾಹಾರ ಉತ್ಸವ ನಡೆಯುತ್ತಲಿದೆ.

Advertisement

ರೆಸ್ಟೋರೆಂಟ್‌ ಕನ್ಸಲ್ಟಿಂಗ್‌ ಕಂಪನಿಯಾದ ಮಾಂಕ್‌ ಸ್ಟುಡಿಯೋಸ್‌, ಈ ಉತ್ಸವವನ್ನು ಆಯೋಜಿಸಿದೆ. ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿರುವ ಈ
ಉತ್ಸವದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಇವೆ.

ಇಡ್ಲಿ-ದೋಸೆಯಿಂದ ಹಿಡಿದು ಪಿಜ್ಜಾ-ಪಾಸ್ತಾ ತನಕ, ಚೋಲೆ ಬಟೂರೆ ಇಂದ ಟಾಕೋಸ್‌ ತನಕ, ಇಟಾಲಿಯನ್‌, ಅಮೆರಿಕನ್‌, ಚೈನೀಸ್‌ ಅಷ್ಟೇ ಅಲ್ಲದೆ, ಬೀದಿ ತಿಂಡಿಗಳನ್ನೂ ಕೂಡಾ ಇಲ್ಲಿ ಸವಿಯಬಹುದು. ನಾಲಗೆಗೆ ರುಚಿ ಸಿಗುವುದಷ್ಟೇ ಅಲ್ಲ, ಮನಸ್ಸನ್ನು ತಣಿಸುವ ಮನೋರಂಜನಾ ಕಾರ್ಯಕ್ರಮಗಳು ಕೂಡಾ ಈ ಮೇಳದ ವೈಶಿಷ್ಟ್ಯಗಳಲ್ಲೊಂದು. ಸುಧಾ ಬರಗೂರರಿಂದ ಹಾಸ್ಯ ಕಾರ್ಯಕ್ರಮ, ಮೆಲ್ಲೋ ಟ್ರೀ ತಂಡದಿಂದ ಹಳೆಯ ಕನ್ನಡ ಹಾಡುಗಳು, ದಿ ನಾಯ್ಕ ಅಂಡ್‌ ಜೋಯಿಸ್‌ ಪ್ರಾಜೆಕ್ಟ್ನಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಎಲ್ಲಿ?: ಫ್ರಿಡಂ ಪಾರ್ಕ್‌ ಆವರಣ
ಯಾವಾಗ?: ಅ.19-20, ಶನಿ-ಭಾನುವಾರ ಬೆಳಗ್ಗೆ 10- 8

Advertisement

Udayavani is now on Telegram. Click here to join our channel and stay updated with the latest news.

Next