Advertisement
ಉಳಿದರ್ಧ ಜೂನ್ ಅಂತ್ಯಕ್ಕೆ ಅಥವಾ ಜುಲೈ ಮಧ್ಯಭಾಗದ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಮೂರು ತಂಡಗಳು ಬೊಲಾರ್ಡ್ ಗಳ ಅಳವಡಿಕೆ ಮಾಡಲಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿರುವ ಐಟಿ-ಬಿಟಿ ಸೇರಿದಂತೆ ಆ ಮಾರ್ಗದ ಕಂಪನಿಗಳು ಜುಲೈ ನಂತರ ತೆರೆಯಲಿವೆ. ಆಗ, ತೀವ್ರ ಸಂಚಾರ ದಟ್ಟಣೆ ಉಂಟಾಗಿ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, ತಂಡಗಳು ಹಗಲು ಮತ್ತು ರಾತ್ರಿ ಕಾರ್ಯನಿರ್ವ ಹಿಸುತ್ತಿವೆ. ದಿನಕ್ಕೆ 500ರಿಂದ 600 ಬೊಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ.
Related Articles
Advertisement
ಬಿಪಿಎಲ್‌ಗೆ ಸಕಾಲ; ಸಿಎಫ್ಬಿ: “ಬಸ್ ಆದ್ಯತಾ ಪಥಗಳ ನಿರ್ಮಾಣಕ್ಕೆ ಇದು ಸಕಾಲ. ಹೇಗೆಂದರೆ ಒಂದೆಡೆ ವಾಹನಗಳ ದಟ್ಟಣೆ ಇಲ್ಲ. ಮತ್ತೂಂದೆಡೆ ಜಾಗತಿಕವಾಗಿ ಪರಿಸರ ಪ್ರಜ್ಞೆ ಜಾಗೃತವಾಗಿದೆ. ಲಾಕ್ ಡೌನ್‌ನಿಂದ ವಾಯುಮಾಲಿನ್ಯ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ. ಇದಕ್ಕೆ ಕಾರಣ ತಾವು ಬಳಸುವ ವಾಹನಗಳು ಎಂಬುದು ಮನದಟ್ಟಾಗಿದೆ. 6 ತಿಂಗಳು ಅಥವಾ ವರ್ಷದ ನಂತರ ಜನ ಸಮೂಹ ಸಾರಿಗೆಯತ್ತ ಜನ ಮುಖಮಾಡುತ್ತಾರೆ ಎಂದು ಸಿಟಿಜನ್ ಫಾರ್ ಬೆಂಗಳೂರು ಸಹ ಸಂಸ್ಥಾಪಕ ಶ್ರೀನಿವಾಸ್ ಅಲವಿಲ್ಲಿ ತಿಳಿಸಿದರು.
ಯಶಸ್ಸಿಗೆ ಬೇಕು ಉತ್ತೇಜನ: ಬಸ್ ಆದ್ಯತಾ ಪಥ ನಿರ್ಮಿಸಿದರೆ ಸಾಲದು. ಅದರ ಯಶಸ್ಸು ಪ್ರಯಾಣಿಕರ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನಗಳು ಬಿಎಂಟಿಸಿಯಿಂದ ನಡೆಯಬೇಕಿದೆ. ಈ ನಿಟ್ಟಿನಲ್ಲಿ ದ್ದೇಶಿತ ಪಥಗಳಲ್ಲಿ ಪ್ರಯಾಣ ದರ ಕಡಿಮೆ ಮಾಡಬೇಕು. ಫ್ಲ್ಯಾಟ್ ಫೇರ್ (ಉದಾ: ನಿಗಿದತ ಅಂತರಕ್ಕೆ 10 ರೂ. ಅಥವಾ 20 ರೂ. ನಿಗದಿಪಡಿಸುವುದು) ನಿಗದಿಪಡಿಸಬೇಕು. ಫ್ರೀಕ್ವೆನ್ಸಿಗಳ ನಿರ್ವಹಣೆ ವ್ಯವಸ್ಥಿತವಾಗಿ ಆಗಬೇಕು. ಆ ಮೂಲಕ ಸಮಯ ಉಳಿತಾಯದ ಮನವರಿಕೆ ಮಾಡಿಕೊಡಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಪ್ರಯಾಣ ದರ ಇಳಿಕೆಯಿಂದಾಗುವ ಹೊರೆ ತಗ್ಗಿಸಲು ಅನುದಾನ ನೀಡಬೇಕು. ಡೀಸೆಲ್ ಮೇಲಿನ ಸೆಸ್‌ನಿಂದ ವಿನಾಯ್ತಿ ನೀಡುವುದು ಸೇರಿದಂತೆ ಹಲವು ಉತ್ತೇಜಕ ಕಾರ್ಯಗಳಾಗಬೇಕೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಆದ್ಯತಾ ಪಥಗಳ ವಿವರ: 12 ಅಧಿಕ ವಾಹನದಟ್ಟಣೆ ಇರುವ ಕಾರಿಡಾರ್‌ಗಳಲ್ಲಿ ಬಸ್ ಆದ್ಯತಾ ಪಥಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಬಳ್ಳಾರಿ ರಸ್ತೆ, ಹಳೆಯ ಮದ್ರಾಸ್ ರಸ್ತೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಹೊರವರ್ತುಲ ರಸ್ತೆ. ಈ ಪೈಕಿ ಹೊರವರ್ತುಲ ರಸ್ತೆಯಲ್ಲಿ ಈಗಾಗಲೇ ಕಾಮಗಾರಿ ನಡೆದಿದೆ. ತುಮಕೂರು ರಸ್ತೆ, ಹಳೆಯ ಮದ್ರಾಸ್ ರಸ್ತೆ, ಹೊಸೂರು ರಸ್ತೆಗೆ ವಿನ್ಯಾಸ ಸಿದ್ಧಗೊಂಡಿದೆ.
ಲಾಕ್‌ಡೌನ್‌ನಿಂದ ಬಸ್ ಆದ್ಯತಾ ಪಥ ಕಾಮಗಾರಿಗೆ ತುಸು ಹಿನ್ನಡೆ ಉಂಟಾಗಿತ್ತು. ಪಥ ನಿರ್ಮಾಣಕ್ಕೆ ಅಗತ್ಯ ಇರುವ ಬೊಲಾರ್ಡ್‌ಗಳು ಲೂಧಿಯಾನದಿಂದ ಬರಬೇಕಿತ್ತು. ಈಗ ನಿರ್ಬಂಧ ಸಡಿಲಿಕೆ ಆಗಿರುವುದರಿಂದ ಸಮಸ್ಯೆ ಬಗೆಹರಿದಂತಾಗಿದೆ. ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.-ಬಿ.ಎಚ್. ಅನಿಲ್ ಕುಮಾರ್, ಆಯುಕ್ತರು, ಬಿಬಿಎಂಪಿ * ವಿಜಯಕುಮಾರ್ ಚಂದರಗಿ