Advertisement

ಏಷ್ಯಾ ಯುವ ಬಾಕ್ಸಿಂಗ್‌: ಒಂದೇ ದಿನ 6 ಚಿನ್ನ ಗೆದ್ದ ಭಾರತ

10:06 PM Aug 31, 2021 | Team Udayavani |

ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಯುವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 6 ಚಿನ್ನದ ಪದಕ ಗೆದ್ದಿದೆ.

Advertisement

ಕೂಟದ 10ನೇ ದಿನವೊಂದರಲ್ಲೇ ಭಾರತ ಈ ಎಲ್ಲ ಚಿನ್ನ ಗೆದ್ದದ್ದು ವಿಶೇಷ. ಒಟ್ಟು 9 ಬೆಳ್ಳಿ, 5 ಕಂಚಿನ ಪದಕ ಕೂಡ ಭಾರತದ ಪಾಲಾಗಿದೆ. ಈ ಮೊದಲು ಕಿರಿಯರ ವಿಭಾಗದಲ್ಲಿ ಭಾರತದ ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನದೊಂದಿಗೆ 8 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕಗಳ ಸಾಧನೆ ಮಾಡಿದ್ದರು.

ಸ್ವರ್ಣ ವಿಜೇತ ವನಿತೆಯರು: ಪ್ರೀತಿ ದಹಿಯಾ (60 ಕೆಜಿ), ಸ್ನೇಹಾ ಕುಮಾರಿ (66 ಕೆಜಿ), ಖುಷಿ (75 ಕೆಜಿ) ಮತ್ತು ನೇಹಾ (54 ಕೆಜಿ) ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದಿತ್ತ ಸಾಧಕರು. ಪ್ರೀತಿ ದಹಿಯಾ 3-2 ಅಂತರದಲ್ಲಿ ಕಝಖಸ್ತಾನದ ಜುಲ್ದಿಜ್‌ ಶೇಕ್ಮೆ ಟೋವಾ ಅವರನ್ನು ಸೋಲಿಸಿದರೆ, ಸ್ನೇಹಾ ಯುಎಇಯ ರಹಮಾ ಖಲ್ಫಾನ್‌ ಅಲ್ಮುರ್ಷಿದಿಯನ್ನು ಪರಾಭವಗೊಳಿಸಿದರು. ಖುಷಿ ಕಝಕಸ್ತಾನದ ದಾನಾ ದಿದೆಯನ್ನು 3-0 ಅಂತರದಿಂದ ಹಿಮ್ಮೆಟ್ಟಿಸಿದರು.

ವಿಶಾಲ್, ವಿಶ್ವಾಮಿತ್ರ ಬಂಗಾರ: ಪುರುಷರ ವಿಭಾಗದಲ್ಲಿ ವಿಶಾಲ್‌ (80 ಕೆಜಿ) ಮತ್ತು ವಿಶ್ವಾಮಿತ್ರ (51 ಕೆಜಿ) ಚಿನ್ನದ ಪದಕ ಗೆದ್ದರು. ಮಹಿಳೆಯರಲ್ಲಿ ಪ್ರೀತಿ (57 ಕೆಜಿ), ಖುಷಿ (63 ಕೆಜಿ), ತನಿಷಾ ಸಂಧು (81 ಕೆಜಿ), ನಿವೇದಿತಾ (48 ಕೆಜಿ), ತಮನ್ನಾ (50 ಕೆಜಿ) ಮತ್ತು ಸಿಮ್ರಾನ್‌ (52 ಕೆಜಿ) ಬೆಳ್ಳಿ ಪದಕ ಜಯಿಸಿದರು. ಪುರುಷರ ವಿಭಾಗದಲ್ಲಿ ಬೆಳ್ಳಿ ಗೆದ್ದವರೆಂದರೆ ವಿಶ್ವನಾಥ್‌ ಸುರೇಶ್‌ (48 ಕೆಜಿ), ವಂಶಮಾನ್‌ (63.5 ಕೆಜಿ) ಮತ್ತು ಜೈದೀಪ್‌ ರಾವತ್‌ (71 ಕೆಜಿ).

Advertisement

Udayavani is now on Telegram. Click here to join our channel and stay updated with the latest news.

Next