Advertisement

ಏಶ್ಯನ್‌ ಕುಸ್ತಿ: ಭಾರತಕ್ಕೆ 10 ಪದಕ

01:21 PM May 15, 2017 | Team Udayavani |

ಹೊಸದಿಲ್ಲಿ: ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಒಟ್ಟು 10 ಪದಕ ಗೆದ್ದು ಉತ್ತಮ ರೀತಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಸ್ಪರ್ಧೆಯ ಅಂತಿಮ ದಿನವಾದ ರವಿವಾರ 125 ಕೆ.ಜಿ. ವಿಭಾಗದಲ್ಲಿ ಭಾರತದ ಸುಮಿತ್‌ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಸುಮಿತ್‌ ಅವರು ಇರಾನ್‌ನ ಯದೊಲ್ಲಾ ಮೊಹಮ್ಮಡ್ಕಜೀಮ್‌ ಅವರಿಗೆ 2-6 ಅಂತರದಿಂದ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಒಂದು ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚು ಸಹಿತ ಭಾರತ ಒಟ್ಟು 10 ಪದಕ ಗೆದ್ದ ಸಾಧನೆ ಮಾಡಿದ್ದು ಈ ಹಿಂದಿನ ಚಾಂಪಿಯನ್‌ಶಿಪ್‌ಗಿಂತ ಉತ್ತಮ ನಿರ್ವಹಣೆ ದಾಖಲಿಸಿದೆ. ಬ್ಯಾಂಕಾಕ್‌ನಲ್ಲಿ ನಡೆದ ಈ ಹಿಂದಿನ ಚಾಂಪಿಯನ್‌ಶಿಪ್‌ನಲ್ಲಿ ಭಾರತ 9 ಪದಕ ಜಯಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next