Advertisement
ಫೈನಲ್‌ನಲ್ಲಿ ಗುರ್‌ಪ್ರೀತ್ ಕೊರಿಯದ ಹೈಯೊನ್‌ವೂ ಕಿಮ್ ವಿರುದ್ಧ 0-8 ಅಂತರದಿಂದ ಪರಾಭವಗೊಂಡರು. ಫೈನಲ್ ಹಾದಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಗುರ್‌ಪ್ರೀತ್ ಸೆಮಿಫೈನಲ್‌ನಲ್ಲಿ 6-5 ಅಂತರದಿಂದ ಕಜಕೀಸ್ಥಾನದ ತಮೆರೆಲನ್ ಶದುಕಾಯೆವ್ ವಿರುದ್ಧ ಜಯಿಸಿದ್ದರು. ಇದಕ್ಕೂ ಮುನ್ನ ಕ್ವಾರ್ಟರ್ ಫೈನಲ್‌ನಲ್ಲಿ ಕತಾರ್‌ನ ಬಖೀತ್ ಶರಿಫ್ ಕೆ ಬಾದ್ರ್ ಅವರನ್ನು 10-0 ಅಂತರದಿಂದ ಮಣಿಸಿದ್ದರು. 87 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ ಸುನೀಲ್ ಕುಮಾರ್ ಇರಾನಿನ ಹಸಿನ್ ಅಹ್ಮದ್ ನೂರಿ ವಿರುದ್ಧ 0-2 ಅಂತರದಿಂದ ಹಿನ್ನಡೆ ಕಂಡರು.
130 ಕೆಜಿ ಕಂಚಿನ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ರೆಸ್ಲರ್ ಪ್ರೇಮ್, ಉಜ್ಬೇಕಿಸ್ಥಾನದ ಮುಮಿಂಜೊನ್ ಅಬ್ದುಲಾವ್ ವಿರುದ್ಧ ಸೋತು ಪದಕ ತಪ್ಪಿಸಿಕೊಂಡರು. ಉಳಿದಂತೆ 55 ಕೆಜಿ ಮತ್ತು 63 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮನಜೀತ್ ಮತ್ತು ವಿಕ್ರಮ್ ಕೃಶ್‌ನಾಥ್ ಕುರಡೆ ಸೋತು ನಿರಾಸೆ ಮೂಡಿಸಿದರು.