ಅಸ್ತಾನಾ (ಕಜಕ್‌ಸ್ಥಾನ): ವನಿತೆಯಿರ ಡಬಲ್ಸ್‌ನನಲ್ಲಿ ಐತಿಹಾಸಿಕ ಕಂಚಿನ ಪದಕ ಸಹಿತ ಭಾರತ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಾರೆ ಮೂರು ಪದಕ ಗೆದ್ದು ಸ್ಪರ್ಧೆ ಮುಗಿಸಿದೆ. ರವಿವಾರ ನಡೆದ ಡಬಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಐಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಅವರು ಜಪಾನಿಯ ಎದುರಾಳಿಯೆದುರು ಸೋತು ಕಂಚಿಗೆ ತೃಪ್ತಿಪಟ್ಟರು.
ವಿಶ್ವದ 15ನೇ ರ್‍ಯಾಂಕಿನ ಮುಖರ್ಜಿದ್ವಯರು ಸೆಮಿ ಫೈನಲ್ ಹೋರಾಟದಲ್ಲಿ ಜಪಾನಿನ ಮಿವಾ ಹರಿಮೊಟೊ ಮತ್ತು ಮಿಯುಯು ಕಿಹಾರಾ ಅವರೆದುರು 4-11, 9-11, 8-11 ಗೇಮ್‌ಗಳಿಂದ ಸೋಲನ್ನು ಕಂಡು ಹೊರಬಿದ್ದರು. ಈ ಮೊದಲು ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅಮೋಘವಾಗಿ ಆಡಿ ದಕ್ಷಿಣ ಕೊರಿಯದ ಜೋಡಿಯನ್ನು ಸೋಲಿಸಿ ಭಾರತಕ್ಕೆ ಡಬಲ್ಸ್‌ನಲ್ಲಿ ಚೊಚ್ಚಲ ಪದಕ ದೊರಕಿಸಿಕೊಟ್ಟಿದ್ದರು.
ಭಾರತೀಯ ವನಿತಾ ತಂಡವು ಈ ಮೊದಲು ನಡೆದ ತಂಡ ವಿಭಾಗ ಸ್ಪರ್ಧೆಯಲ್ಲಿ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಜಯಿಸಿತ್ತು. ಮಣಿಕಾ ಬಾತ್ರಾ, ಐಹಿಕಾ ಮತ್ತು ಸುತೀರ್ಥ ಮುಖರ್ಜಿ ಅವರನ್ನು ಒಳಗೊಂಡ ಭಾರತೀಯ ತಂಡ ಜಪಾನ್ ವಿರುದ್ಧ ಸೋತು ಕಂಚು ಪಡೆದಿತ್ತು. 1972ರಲ್ಲಿ ಈ ಸ್ಪರ್ಧೆ ಆರಂಭವಾದ ಬಳಿಕ ಭಾರತ ಈ ವಿಭಾಗದಲ್ಲಿ ಪದಕ ಗೆದ್ದಿರುವುದು ಇದೇ ಮೊದಲ ಸಲವಾಗಿದೆ.
ಪುರುಷರಿಗೂ ಕಂಚು
ಪುರುಷರ ವಿಭಾಗದ ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚು ಲಭಿಸಿದೆ. ಅಚಂತಾ ಶರತ್ ಕಮಲ್, ಮಾನವ್ ಥಕ್ಕರ್ ಮತ್ತು ಹರ್ಮೀತ್ ದೇಸಾಯಿ ಅವರನ್ನು ಒಳಗೊಂಡ ಭಾರತ ತಂ ಸೆಮಿಫೈನಲ್‌ನಲ್ಲಿ ಚೈನೀಸ್ ತೈಪೆ ವಿರುದ್ಧ 0-3 ಅಂತರದಿಂದ ಸೋತು ಕಂಚು ಪಡೆಯಿತು.