Advertisement

ಜನವರಿ ಎರಡನೇ ವಾರದಲ್ಲಿ ಐಪಿಎಲ್‌ ಮೆಗಾ ಹರಾಜು?

11:10 PM Dec 12, 2021 | Team Udayavani |

ಮುಂಬಯಿ: ಮುಂಬರುವ 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿಗೆ ಎಲ್ಲ ತಂಡಗಳು ಸಿದ್ದಗೊಂಡಿವೆ.

Advertisement

ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿವೆ. ನೂತನ ಎರಡು ಫ್ರಾಂಚೈಸಿಗಳು ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದಾದ ಬಳಿಕ ಮೆಗಾ ಹರಾಜು ನಡೆಸುವುದು ಬಿಸಿಸಿಐ ಯೋಜನೆ.

ಆದರೆ ಇದೀಗ ಹೊಸ ಫ್ರಾಂಚೈಸಿಗಳಿಗೆ ನೀಡಲಾದ ವಿಶೇಷ ಆಯ್ಕೆಯ ಅಂತಿಮ ದಿನಾಂಕವನ್ನು ಮುಂದೂಡುವ ಸಾಧ್ಯತೆಯೊಂದು ಗೋಚರಿಸಿದೆ. ಆಗ ಮೆಗಾ ಹರಾಜು ಕೂಡ ಮುಂದೂಡಲ್ಪಡುವುದು ಅನಿವಾರ್ಯವಾಗುತ್ತದೆ.

ಈ ಹಿಂದೆ ಬಿಸಿಸಿಐ ಹೊಸ ಫ್ರಾಂಚೈಸಿಗಳಿಗೆ ಮೂವರು ಆಟಗಾರರನ್ನು ಆಯ್ಕೆ ಮಾಡಲು ಡಿ. 25ರ ಗಡುವು ನೀಡಿತ್ತು. ಆದರೀಗ ಈ ಅವಕಾಶವನ್ನು ತಿಂಗಳ ಅಂತ್ಯದ ವರೆಗೆ ಮುಂದೂಡಿದೆ ಎಂದು ವರದಿಯಾಗಿದೆ. ಅದರಂತೆ ಜನವರಿ ಮೊದಲ ವಾರದಲ್ಲಿ ನಡೆಯಬೇಕಿದ್ದ ಮೆಗಾ ಹರಾಜನ್ನು ಕೂಡ ಒಂದು ವಾರ ಮುಂದೂಡಬೇಕಾಗುತ್ತದೆ. ಆಗ ಜನವರಿ 2ನೇ ವಾರದಲ್ಲಿ ಹರಾಜು ಏರ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್‌ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ

Advertisement

34 ಕೋಟಿ ರೂ. ಮೊತ್ತ
ನೂತನ ಎರಡು ಫ್ರಾಂಚೈಸಿಗಳು ತಲಾ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಕೆಲವು ಷರತ್ತುಗಳನ್ನು ವಿಧಿಸಿದೆ. ಅಂದರೆ 34 ಕೋಟಿ ರೋ. ಮೊತ್ತದ ಒಳಗೆ ಈ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಅದರಂತೆ ಮೊದಲ ಆಟಗಾರನಿಗೆ 15 ಕೋಟಿ ರೂ., 2ನೇ ಆಟಗಾರನಿಗೆ 11 ಕೋಟಿ ರೂ. ಹಾಗೂ 3ನೇ ಆಟಗಾರನಿಗೆ 8 ಕೋಟಿ ರೂ. ವ್ಯಯಿಸಬೇಕಾಗುತ್ತದೆ.

ಈ ಮೂಲಕ ಈಗಾಗಲೇ ಹಳೆಯ ಫ್ರಾಂಚೈಸಿಗಳು ರಿಲೀಸ್‌ ಮಾಡಿರುವ ಇಬ್ಬರು ಭಾರತೀಯ ಆಟಗಾರರು ಪ್ಲಸ್‌ ಒಬ್ಬ ವಿದೇಶಿ ಆಟಗಾರನನ್ನು ನೂತನ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆ ಪ್ರಕ್ರಿಯೆಗೆ ಹೊಸ ಫ್ರಾಂಚೈಸಿಗಳು ಹೆಚ್ಚಿನ ಸಮಯಾವಕಾಶ ಕೇಳಿವೆ. ಹೀಗಾಗಿ ಮೆಗಾ ಹರಾಜು ಪ್ರಕ್ರಿಯೆ ಸಹಜವಾಗಿಯೇ ಮುಂದೂಡಲ್ಪಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next