Advertisement
ಪದಕಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. 10 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಭಾರತದ ಖಾತೆಯಲ್ಲಿವೆ. ಚೀನ (155), ಇರಾನ್ (44) ಮತ್ತು ಉಜ್ಬೆಕಿಸ್ಥಾನ್ (38) ಮೊದಲ 3 ಸ್ಥಾನದಲ್ಲಿವೆ.
ಪ್ರಾಚಿ ದೇಸಾಯಿ ಕನೋಯಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೋಮವಾರವಷ್ಟೇ ವಿಎಲ್2 ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ಪ್ರಾಚಿ, ಮಂಗಳವಾರ ಕೆಎಲ್2 ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಮಂಗಳವಾರ ಚಿನ್ನದ ಪದಕ ಜಯಿಸಿದ ಭಾರತದ ಇತರ ಸಾಧಕರೆಂದರೆ ದೀಪ್ತಿ ಜೀವಾಂಜಿ (ವನಿತೆಯರ ಟಿ20 400 ಮೀ.), ಕರ್ನಾಟಕದ ಶರತ್ ಶಂಕರಪ್ಪ ಮಾಕನಹಳ್ಳಿ (ಪುರುಷರ ಟಿ13 5,000 ಮೀ.) ಮತ್ತು ನೀರಜ್ ಯಾದವ್ (ಪುರುಷರ ಎಫ್54/55/56 ಡಿಸ್ಕಸ್ ತ್ರೋ).