Advertisement
10ನೇ ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಭಾರತ ಪುರುಷರ ತಂಡವನ್ನು ಅಜಯ್ ಠಾಕೂರ್ ಮುನ್ನಡೆ ಸಲಿದ್ದಾರೆ. ಸುರ್ಜಿತ್ ಉಪನಾಯಕ ಆಗಿರು ತ್ತಾರೆ. ಮಹಿಳಾ ವಿಭಾಗದ 5ನೇ ಏಶ್ಯನ್ ಕಬಡ್ಡಿ ಕೂಟಕ್ಕೆ ಅಭಿಲಾಷೆ ಮಹಾತ್ರೆ ಭಾರತ ತಂಡದ ನಾಯಕಿದ್ದು, ಪ್ರಿಯಾಂಕಾ ಉಪನಾಯಕಿ ಯಾಗಿದ್ದಾರೆ.
ಈ ಪಂದ್ಯಾವಳಿಗೆಂದು ಪ್ರಕಟಿಸಲಾದ ತಂಡ ದಲ್ಲಿ ಹಿರಿಯ ಆಟಗಾರರನ್ನು ಕೈಬಿಡಲಾಗಿದೆ. ಒಟ್ಟು 36 ಮಂದಿ ಸಂಭಾವ್ಯ ಆಟಗಾರರು ಹರ್ಯಾಣದ ಸೋನೆಪತ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರೊ ಕಬಡ್ಡಿಯ ಪ್ರಮುಖ ತಂಡಗಳಲ್ಲಿ ಒಂದಾದ ಯು ಮುಂಬಾ ತಂಡದ ನಾಯಕ ಹಾಗೂ ಭಾರತ ತಂಡದ ಮಾಜಿ ನಾಯಕ ಅನೂಪ್ ಕುಮಾರ್, ಜೈಪುರ ತಂಡದ ಪ್ರಮುಖ ಆಟಗಾರ ಜಸ್ವೀರ್ ಸಿಂಗ್, ಮಂಜಿತ್ ಚಿಲ್ಲರ್, ಕಾಶಿಲಿಂಗ್ ಅಡಕೆ, ಧರ್ಮರಾಜ್ ಚೆರಾÉಥನ್, ವಿಶಾಲ್ ಮಾನೆ, ಗಿರೀಶ್ ಮಾರುತಿ ಎರ್ನಾಕ್ ಸೇರಿದಂತೆ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಪ್ರೊ ಕಬಡ್ಡಿಯಲ್ಲಿ ನೀಡಿದ ಪ್ರದರ್ಶನವೂ ಈ ಸಲ ಆಯ್ಕೆಯಲ್ಲಿ ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು “ಉದಯವಾಣಿ’ಗೆ ಭಾರತ ಕಬಡ್ಡಿ ಸಂಸ್ಥೆ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
Related Articles
Advertisement
ಭಾರತ ಸೋಲಿಲ್ಲದ ಸರದಾರಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಸೋಲಿಲ್ಲದ ಸರದಾರ. ಭಾರತ ಸತತ 9 ಬಾರಿ ಪುರುಷರ ವಿಭಾಗದಲ್ಲಿ ಏಶ್ಯನ್ ಚಾಂಪಿಯನ್ ಆಗಿ ಮೆರೆದಿದೆ. ಮಹಿಳಾ ವಿಭಾಗದಲ್ಲಿ ಸತತ 4 ಬಾರಿ ಚಾಂಪಿಯನ್ ಆಗಿದೆ. ಈ ಸಲವೂ ಭಾರತವೇ ಫೇವರಿಟ್ ಯಾದಿಯಲ್ಲಿದೆ. ರಾಜ್ಯದ ಆಟಗಾರರಿಲ್ಲ !
ಏಶ್ಯನ್ ಕೂಟಕ್ಕೆ ತಂಡ ಪ್ರಕಟಗೊಂಡ ಬೆನ್ನಲ್ಲೇ ಕರ್ನಾಟಕಕ್ಕೆ ತೀವ್ರ ನಿರಾಸೆ ಎದುರಾಯಿತು. ಎರಡೂ ತಂಡಗಳಲ್ಲಿ ರಾಜ್ಯದ ಆಟಗಾರರಿಗೆ ಸ್ಥಾನ ಲಭಿಸದಿರುವುದೇ ಇದಕ್ಕೆ ಕಾರಣ. ಮಹಿಳಾ ವಿಭಾಗದಲ್ಲಿ ಆಯ್ಕೆ ರೇಸ್‌ನಲ್ಲಿ ಅನುಭವಿ ಆಟಗಾರ್ತಿ ರಾಜ್ಯದ ತೇಜಸ್ವಿನಿ ಬಾಯಿ, ಉಷಾರಾಣಿ, ನವ್ಯಾ ಇದ್ದರು. ಇವರು ಅಂತಿಮವಾಗಿ ಆಯ್ಕೆಯಾಗಲಿಲ್ಲ. ಪುರುಷರ ವಿಭಾಗದಲ್ಲಿ ಸಂತೋಷ್, ಹರೀಶ್ ನಾಯ್ಕ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಅಂತಿಮ ಪಟ್ಟಿಯಲ್ಲ ಇವರಿಗೆ ಸ್ಥಾನ ಸಿಗಲಿಲ್ಲ. ಪುರುಷರ ತಂಡ
ಅಜಯ್ ಠಾಕೂರ್, ದೀಪಕ್ ನಿವಾಸ್ ಹೂಡಾ, ಮಹೇಂದ್ರ ಸಿಂಗ್, ಮಣಿಂದರ್ ಸಿಂಗ್, ಮೋಹಿತ್ ಚಿಲ್ಲರ್, ನಿತಿನ್ ತೋಮರ್, ಪ್ರದೀಪ್ ನರ್ವಾಲ್, ರಾಹುಲ್ ಚೌಧರಿ, ರೋಹಿತ್ ಕುಮಾರ್, ಸಚಿನ್, ಸಂದೀಪ್ ನರ್ವಲ್, ಸುರೇಂದ್ರ ನಾಡ, ಸುರ್ಜಿತ್, ವಿಶಾಲ್ ಭಾರಧ್ವಾಜ್.
ಕೋಚ್: ರಾಮ್‌ಬೀರ್ ಸಿಂಗ್ ವನಿತಾ ತಂಡ
ಅಭಿಲಾಷಾ ಮಹಾತ್ರೆ (ನಾಯಕಿ), ಕಾಂಚನ್ ಜ್ಯೋತಿ ದೀಕ್ಷಿತ್, ಕವಿತಾ, ಮನ್‌ಪ್ರೀತ್ ಕೌರ್, ಮರಿಯಾ ಮೊನಿಕಾ, ಪಾಯಲ್ ಚೌಧರಿ, ಪ್ರಿಯಾಂಕಾ, ಪ್ರಿಯಾಂಕಾ ನೇಗಿ, ರಣದೀಪ್ ಕೌರ್ ಖೇರ್, ರಿತು, ಸಾಕ್ಷಿ ಕುಮಾರಿ, ಸಯಾಲಿ ಉದಯ್ ಜಾಧವ್, ಶಮಾ ಪ್ರವೀಣ್, ಸೋನಿಯಾ.
ಕೋಚ್: ಸುಶ್ರೀ ಬನಾನಿ