Advertisement

2020ರ ಅಂತ್ಯದೊಳಗೆ ಏಷ್ಯನ್‌ ಗೇಮ್ಸ್‌ ಕಾಮಗಾರಿ ಪೂರ್ಣ

12:33 AM Apr 12, 2020 | Sriram |

ಹ್ಯಾಂಗ್‌ಝು (ಚೀನ),: “2022ರಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಕೂಟಕ್ಕೆ ತಯಾರಿ ಶರವೇಗದಲ್ಲಿ ನಡೆಯುತ್ತಿದೆ, 2020ರ ಅಂತ್ಯದೊಳಗೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಹ್ಯಾಂಗ್‌ಝು ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸದ್ಯ ಚೀನದಲ್ಲಿ ಕೋವಿಡ್ 19 ವೈರಸ್‌ ಇದ್ದರೂ ಒಟ್ಟು 58 ಆತಿಥ್ಯ ತಾಣಗಳ ಪೈಕಿ 43 ಕ್ರೀಡಾಂಗಣದಲ್ಲಿರುವ ಎಲ್ಲ ಕೆಲಸಗಳು ಮುಗಿದಿವೆ, ಇನ್ನೂ ಕೆಲವು ತಾಣಗಳಲ್ಲಿ ಚುರುಕಿನ ವೇಗದಲ್ಲಿ ಕಾಮಗಾರಿ ನಡೆಯುತ್ತಿವೆ. “ಈ ವರ್ಷದ ಅಂತ್ಯದಲ್ಲಿ ನಾವು ಶೇ. 85ರಷ್ಟು ಕೆಲಸ ಮುಗಿಸಿದ್ದೇವೆ’ ಎಂದು ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next