Advertisement
ದ್ವಿತೀಯ ಶ್ರೇಯಾಂಕದ ರಾಮ್‌ಕುಮಾರ್ -ಮೈನೆನಿ ಅವರು ಕೊರಿಯದ ಸೀಂಗ್‌ಚಾನ್ ಹಾಂಗ್ ಮತ್ತು ಸೂನ್‌ವೂ ಕ್ವಾನ್ ಅವರನ್ನು 6-1, 6-7 (8), 10-0 ಸೆಟ್‌ಗಳಿಂದ ಸೋಲಿಸಿ ಫೈನಲ್ ಹಂತಕ್ಕೇರಿದರು. ಮೈನೆನಿ ಅವರು ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಚಿನ್ನದ ಪದಕ ಗೆಲ್ಲುವ ಒಳ್ಳೆಯ ಅವಕಾಶ ಪಡೆದಿದ್ದಾರೆ. ಅವರು ಈ ಹಿಂದೆ 2014ರ ಗೇಮ್ಸ್ ನಲ್ಲಿ ಸಾನಿಯಾ ಮಿರ್ಜಾ ಅವರ ಜತೆಗೂಡಿ ಮಿಕ್ಸೆಡ್ ಡಬಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಮತ್ತು ಭೋಸಲೆ ಅವರು ಕಜಾಕ್‌ಸ್ಥಾನದ ಝಿಬೆಕ್ ಕುಲಂಬಯೆವಾ ಮತ್ತು ಗ್ರಿಗೋರಿ ಲೊಮಕಿನ್ ಅವರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲಿಗೇರಿದ್ದಾರೆ. ಬೋಪಣ್ಣ ಅವರು ಯೂಕಿ ಭಾಂಬ್ರಿ ಜತೆಗೂಡಿ ಡಬಲ್ಸ್‌ನಲ್ಲಿ ಆಡಿದ್ದು ಈಗಾಗಲೇ ಹೊರಬಿದ್ದಿದ್ದಾರೆ.