Advertisement
ಚೀನಾದ ಹರ್ಡಲರ್ ವು ಯಾನ್ನಿ ತಪ್ಪು ಆರಂಭಕ್ಕಾಗಿ ಅನರ್ಹಗೊಂಡಿದ್ದರು. ಉಳಿದ ಹಡ್ಲರ್‌ಗಳಲ್ಲಿ ಚೀನಾದ ಯಾನ್ನಿಯನ್ನು ಅನುಸರಿಸಿದ ಕಾರಣ ಭಾರತದ ಜ್ಯೋತಿ ಯರ್ರಾಜಿ ಕೂಡ ಅನರ್ಹಗೊಂಡಿದ್ದಾರೆಂದು ತೋರಿಬಂತು. ಯನ್ನಿ ಮತ್ತು ಯರ್ರಾಜಿ ಇಬ್ಬರೂ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದರು.
Related Articles
Advertisement
ಜ್ಯೋತಿ ಅವರು ಲೇನ್ 5 ರಲ್ಲಿ, ವು ಲೇನ್ 4 ರಲ್ಲಿ ಇದ್ದರು. ಅಥ್ಲೀಟ್‌ಗಳು ತಮ್ಮ ರನ್ನಿಂಗ್ ಬ್ಲಾಕ್‌ಗಳಿಗೆ ಪ್ರವೇಶಿಸಿ ಓಟವನ್ನು ಪ್ರಾರಂಭಿಸಲು ಸಿದ್ಧರಾಗಿದ್ದರು. ಸ್ಟಾರ್ಟ್ ಗನ್ ಆಫ್ ಆಗುವ ಮೊದಲು, ವೂ ಬ್ಲಾಕ್‌ಗಳಿಂದ ಹೊರಹೋಗಿಯಾಗಿತ್ತು, ತತ್ ಕ್ಷಣ ಓಟವನ್ನು ನಿಲ್ಲಿಸಲಾಯಿತು.ಜ್ಯೋತಿ ಅವರು ಪ್ರತಿಭಟಿಸಿ ತನ್ನ ಪಕ್ಕದ ಲೇನ್ ಕಡೆಗೆ ಸನ್ನೆ ಮಾಡಿ ವೂ ತಪ್ಪು ಆರಂಭಿಸಿದ್ದಾಳೆ ಎಂದು ಸೂಚಿಸಿದರು. ಅಧಿಕಾರಿಗಳು, ಟ್ರ್ಯಾಕ್‌ಸೈಡ್ ಪರದೆಯಲ್ಲಿ ಹಲವು ಬಾರಿ ರಿಪ್ಲೈ ಗಳನ್ನು ನೋಡಿದ ನಂತರ, ವೂ ಡೀಫಾಲ್ಟ್ ಆಗಿದ್ದಾರೆ ಎಂದು ಕೆಂಪು ಕಾರ್ಡ್ ತೋರಿಸಿದರು. ಕೆಂಪು ಕಾರ್ಡ್ ತೋರಿಸಿದರೆ ಅನರ್ಹ. ಓಟದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ. ಅಧಿಕಾರಿ ಜ್ಯೋತಿ ಅವರಿಗೂ ರೆಡ್ ಕಾರ್ಡ್ ತೋರಿಸಿದರು. ಅವರು ತತ್ ಕ್ಷಣವೇ ನಿರ್ಧಾರದ ವಿರುದ್ಧ ಪ್ರತಿಭಟಿಸಿದರು.