ಹ್ಯಾಂಗ್ ಝೂ: ಭಾರತೀಯ ಅಥ್ಲಿಟ್ ಗಳು ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಬೇಟೆ ಮುಂದುವರಿಸಿದ್ದಾರೆ. ಇಂದು ನಡೆದ ವನಿತಾ 5000 ಮೀಟರ್ ಓಟದಲ್ಲಿ ಭಾರತದ ಪಾರುಲ್ ಚೌಧರಿ ಚಿನ್ನ ಗೆದ್ದು ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಅತ್ಯಂತ ರೋಚಕವಾಗಿ ನಡೆದ ಫೈನಲ್ ಓಟದಲ್ಲಿ ಪಾರುಲ್ ಚೌಧರಿ ಕೊನೆಯ ಕ್ಷಣದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸೋಮವಾರ ಸ್ಟೀಪರ್ ಚೇಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಪಾರುಲ್ ಚೌಧರಿ ಇಂದು ಸ್ವರ್ಣ ಪದಕ ಗೆದ್ದು ಹ್ಯಾಂಗ್ ಝೂ ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವಂತೆ ಮಾಡಿದರು
.
ಇದನ್ನೂ ಓದಿ:Beauty Tips: ತ್ವಚೆಯ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಲು ಕಾಫಿಪುಡಿ ಬಳಸಿ…
ಇಂದಿನ ಓಟದಲ್ಲಿ ಆರಂಭದಿಂದಲೂ ಟಾಪ್ 3ಯಲ್ಲಿದ್ದ ಪಾರುಲ್ ಚೌಧರಿ ಕೊನೆಯ ಸುತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಕೇವಲ 25 ಮೀಟರ್ ಓಟ ಬಾಕಿ ಇರುವಾಗ ಚಾಲಾಕಿ ಪ್ರದರ್ಶನ ನೀಡಿದ ಪಾರುಲ್ ಮೊದಲ ಸ್ಥಾನದಲ್ಲಿದ್ದ ಜಪಾನ್ ಓಟಗಾರ್ತಿಗೆ ಶಾಕ್ ನೀಡಿ ಮೊದಲ ಸ್ಥಾನಕ್ಕೇರಿದರು.
ಭಾರತದ ಮತ್ತೋರ್ವ ಓಟಗಾರ್ತಿ ಅಂಕಿತಾ ಐದನೇ ಸ್ಥಾನ ಪಡೆದರು.