ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ 2023ರ ಕ್ರಿಕೆಟ್ ನಲ್ಲಿ ಭಾರತ ತಂಡವು ಚಿನ್ನದ ಪದಕ ಗೆದ್ದಿದೆ. ವನಿತೆಯರ ಕೂಟದಂತೆ ಪುರುಷರ ತಂಡವೂ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ಗೆದ್ದುಕೊಂಡಿದೆ.
ಶನಿವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಫೈನಲ್ ಪಂದ್ಯವು ಮಳೆಯ ಕಾರಣದಿಂದ ಅಂತ್ಯ ಕಾಣದೆ ರದ್ದಾದರೂ ಉತ್ತಮ ಶ್ರೇಯಾಂಕ ಹೊಂದಿರುವ ಕಾರಣ ಭಾರತ ತಂಡವನ್ನು ವಿಜೇತ ಎಂದು ಘೋಷಿಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 18.2 ಓವರ್ ವೇಳೆ ಐದು ವಿಕೆಟ್ ಕಳೆದುಕೊಂಡು 112 ರನ್ ಮಾಡಿದ್ದ ವೇಳೆ ಮಳೆ ಆರಂಭವಾಯಿತು. ಆದರೆ ನಂತರ ಮಳೆಯ ಕಾರಣದಿಂದ ಪಂದ್ಯ ನಡೆಯಲಿಲ್ಲ.
ಆರಂಭಿಕ ಕುಸಿತ ಕಂಡ ಅಫ್ಘಾನ್ ಗೆ ಶಹೀದುಲ್ಲಾ ಕಮಲ್ ಮತ್ತು ನಾಯಕ ಗುಲ್ಬದಿನ್ ನೈಬ್ ನೆರವಾದರು. ಕಮಲ್ ಅಜೇಯ 49 ರನ್ ಗಳಿಸಿದರೆ, ನೈಬ್ ಅಜೇಯ 27 ರನ್ ಮಾಡಿದರು. ಭಾರತದ ಪರ ಅರ್ಶದೀಪ್ ಸಿಂಗ್, ಶಿವಂ ದುಬೆ, ಶಹಬಾಜ್ ಅಹಮದ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ಅಫ್ಘಾನಿಸ್ತಾನ ಬೆಳ್ಳಿ ಪದಕ ಪಡೆದರೆ, ಬಾಂಗ್ಲಾದೇಶ ಕಂಚಿನ ಪದಕ ಪಡೆಯಿತು.