ಹೊಸದಿಲ್ಲಿ: ಚೀನದಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ಗಾಗಿ ಡೇವಿಸ್ ಕಪ್ ಕೂಟದ ದಿನಾಂಕವನ್ನು ಬದಲಿಸಲು ಇಂಟರ್‌ನ್ಯಾಶನಲ್ ಟೆನಿಸ್ ಫೆಡರೇಶನ್ ನಿರ್ಧರಿಸಿದೆ.
ಇದರಿಂದಾಗಿ ಭಾರತವು ಡೇವಿಸ್ ಕಪ್ ಮತ್ತು ಏಷ್ಯನ್ ಗೇಮ್ಸ್‌ಗೆ ಶ್ರೇಷ್ಠ ಆಟಗಾರರನ್ನು ಕಣಕ್ಕೆ ಇಳಿಸಲು ಸಾಧ್ಯವಾಗಿದೆ ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ ತಿಳಿಸಿದೆ.
ಭಾರತೀಯ ಡೇವಿಸ್ ಕಪ್ ತಂಡವು ಸೆ. 16-17 ಅಥವಾ 17-18ರಂದು ನಾರ್ವೆ ಎದುರು ಆಡಲಿದೆ. ಏಷ್ಯನ್ ಗೇಮ್ಸ್‌ನ ಟೆನಿಸ್ ಸ್ಪರ್ಧೆ ಸೆ. 10-14ರ ವರೆಗೆ ನಡೆಯಲಿದೆ. ಇದರಿಂದಾಗಿ ಭಾರತ ಸಹಿತ ಏಷ್ಯದ ತಂಡಗಳು ತಮ್ಮ ಶ್ರೇಷ್ಠ ತಂಡವನ್ನು ಡೇವಿಸ್ ಅಥವಾ ಏಷ್ಯನ್ ಗೇಮ್ಸ್‌ನಲ್ಲಿ ಆಡಿಸಬೇಕಾಗಿದೆ.
ಇದನ್ನೂ ಓದಿ:ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ
ಈ ಸಮಸ್ಯೆಯನ್ನು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ ಮತ್ತು ಏಷ್ಯನ್ ಟೆನಿಸ್ ಫೆಡರೇಶನ್‌ನ ಅಧಿಕಾರಿಗಳು ಇಂಟರ್‌ನ್ಯಾಶನಲ್ ಟೆನಿಸ್ ಫೆಡರೇಶನ್‌ಗೆ ಮನವರಿಕೆ ಮಾಡಿತಲ್ಲದೆ, ಡೇವಿಸ್ ಕಪ್‌ನ ದಿನಾಂಕ ಬದಲಿಸುವಂತೆ ಮನವಿ ಮಾಡಿತ್ತು.
ಇದರಿಂದಾಗಿ ಭಾರತ ಮತ್ತು ನಾರ್ವೆ ತಂಡಗಳ ನಡುವಣ ಡೇವಿಸ್ ಕಪ್ ಸಹಿತ ಇನ್ನುಳಿದ ಏಷ್ಯದ 9 ತಂಡಗಳ ಡೇವಿಸ್ ಕಪ್ ಹೋರಾಟ ಸೆ. 14-15ರಂದು ನಡೆಯಲಿದೆ.