ಹ್ಯಾಂಗ್‌ಝೂ: ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ನೇತೃತ್ವದ ಭಾರತೀಯ ತಂಡವು ಶುಕ್ರವಾರದಿಂದ ಆರಂಭವಾಗುವ ಆ್ಯತ್ಲೆಟಿಕ್ ಸ್ಪರ್ಧೆಯಲ್ಲಿ ಗರಿಷ್ಠ ಪದಕ ಗೆಲ್ಲುವ ಗುರಿಯೊಂದಿಗೆ ಹೋರಾಟಕ್ಕೆ ಇಳಿಯಲಿದೆ. ಭಾರತ ಕಳೆದ ಗೇಮ್ಸ್ ನಲ್ಲಿ 20 ಪದಕ ಜಯಿಸಿತ್ತು.
ಆ್ಯತ್ಲೆಟಿಕ್ ತಂಡದಲ್ಲಿ 65 ಸ್ಪರ್ಧಿ ಗಳಿದ್ದು ಕಡಿಮೆ ಪಕ್ಷ 25 ಪದಕ ಗೆಲ್ಲುವ ಗುರಿ ಹೊಂದಲಾಗಿದೆ. ಮೂವರು ಆ್ಯತ್ಲೀಟ್‌ಗಳು ಗಾಯದ ಸಮಸ್ಯೆ ಯಿಂದ ಹೊರಗುಳಿದಿದ್ದಾರೆ. ಎಲ್ಲ ಕಣ್ಣು ನೀರಜ್ ಚೋಪ್ರಾ ಅವರ ಮೇಲಿದೆ.
ಚೋಪ್ರಾ ಅವರಲ್ಲದೇ ಶಾಟ್‌ಪುಟ್ ಎಸೆತಗಾರ ತಜಿಂದರ್‌ಪಾಲ್ ಸಿಂಗ್ ತೂರ್, ಸ್ಟೀಪಲ್‌ಚೇಸರ್ ಅವಿನಾಶ್ ಸಾಬ್ಳೆ ಸಹಿತ ಪುರುಷರ ಮತ್ತು ಮಹಿಳೆಯರ ರಿಲೇ ತಂಡಗಳು ಚಿನ್ನ ಗೆಲ್ಲಬಹುದೆಂದು ನಿರೀಕ್ಷಿಸಲಾಗಿದೆ. ಇರಲ್ಲಿ ತೂರ್ ಮತ್ತು ಪುರುಷರ ರಿಲೇ ತಂಡ ಕಳೆದ ಗೇಮ್ಸ್‌ನಲ್ಲಿ ಗೇಮ್ಸ್ ದಾಖಲೆ ಮಾಡಿತ್ತು.
ಒಲಿಂಪಿಕ್ ಚಾಂಪಿಯನ್ ಜತೆಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿ ಸಿದ್ದ 25ರ ಹರೆಯದ ಚೋಪ್ರಾ ಚಿನ್ನ ಗೆಲ್ಲುವ ಫೇವರಿಟ್ ಆ್ಯತ್ಲೀಟ್ ಆಗಿ ದ್ದಾರೆ. ಅವರು ಕಳೆದ ಬಾರಿ ಗೆದ್ದ ಚಿನ್ನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಪಾಕಿಸ್ಥಾನದ ಅರ್ಷದ್ ನದೀಮ್ ಅವರು ನೀರಜ್ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆಯಿದೆ. ಕಳೆದ ಗೇಮ್ಸ್‌ನಲ್ಲಿ ಅವರು ಕಂಚು ಜಯಿಸಿದ್ದರು. ಪುರುಷರ ಜಾವೆಲಿನ್‌ನಲ್ಲಿ ಕಿಶೋರ್ ಜೆನಾ ಕೂಡ ಪದಕ ಗೆಲ್ಲುವ ಸ್ಪರ್ಧಿಯಾಗಿದ್ದಾರೆ. ಏಷ್ಯನ್ ಆ್ಯತ್ಲೀಟ್‌ಗಳ ಪೈಕಿ ಅವರು ಮೂರನೇ ಶ್ರೇಷ್ಠ ಸಾಧನೆ ಮಾಡಿದವರಾಗಿದ್ದಾರೆ.
ಶಾಟ್‌ಪುಟ್‌ನಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್, ಸ್ಟೀಪಲ್‌ಚೇಸರ್ ಅವಿನಾಶ್ ಅವಲ್ಲದೇ ನಡಿಗೆ ಸ್ಪರ್ಧೆ ಯಲ್ಲಿ ಸಂದೀಪ್ ಕುಮಾರ್, ವಿಕಾಸ್ ಸಿಂಗ್, ಪ್ರಿಯಾಂಕಾ ಗೋಸ್ವಾಮಿ, ಹರ್ಡಲ್ಸ್‌ನಲ್ಲಿ ವಿತ್ಯಾ ರಾಮ್‌ರಾಜ್, ಜ್ಯೋತಿ ಯರ್ರಾಜಿ, ಟ್ರಿಪಲ್ ಜಂಪ್ ನಲ್ಲಿ ಪ್ರವೀಣ್ ಚಿತ್ರವೆಲ್ ಮುಂತಾ ದವರು ಪದಕ ಗೆಲ್ಲುವ ಸ್ಪರ್ಧಿಗಳಾಗಿದ್ದಾರೆ.