Advertisement

Asian Games ಬಾಂಗ್ಲಾ ವಿರುದ್ಧ ಭಾರತಕ್ಕೆ ಗೆಲುವು: ನಾಕೌಟ್‌ ಪ್ರವೇಶದ ಆಸೆ ಜೀವಂತ

12:03 AM Sep 22, 2023 | Team Udayavani |

ಹ್ಯಾಂಗ್‌ಝೂ: ಕೊನೆ ಕ್ಷಣದಲ್ಲಿ ಸುನೀಲ್‌ ಚೇತ್ರಿ ಅವರು ಹೊಡೆದ ಅಮೂಲ್ಯ ಗೋಲಿನ ನೆರವಿನಿಂದ ಭಾರತ ತಂಡವು ಬಾಂಗ್ಲಾದೇಶವನ್ನು ಏಕೈಕ ಗೋಲಿನಿಂದ ಸೋಲಿಸಿದೆ. ಈ ಗೆಲುವಿನಿಂದ ಭಾರತ ತಂಡವು ನಾಕೌಟ್‌ ಹಂತಕ್ಕೇರುವ ಅವಕಾಶವನ್ನು ಜೀವಂತವಿರಿಸಿಕೊಂಡಿದೆ.

Advertisement

ಮಂಗಳವಾರ ನಡೆದ ಪಂದ್ಯದಲ್ಲಿ ಆತಿಥೇಯ ಚೀನ ಕೈಯಲ್ಲಿ 1-5 ಗೋಲುಗಳಿಂದ ಭಾರೀ ಅಂತರದ ಸೋಲು ಕಂಡಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಗೆಲ್ಲುವುದು ಅತೀ ಮುಖ್ಯವಾಗಿತ್ತು. ಗೆಲುವಿಗಾಗಿ ಭಾರತ ಮತ್ತು ಬಾಂಗ್ಲಾದೇಶ ಪ್ರಬಲ ಹೋರಾಟ ಸಂಘಟಿಸಿದ್ದವು. ಆದರೆ ಪಂದ್ಯದ 85ನೇ ನಿಮಿಷದಲ್ಲಿ ಬಾಂಗ್ಲಾ ಮಾಡಿದ ತಪ್ಪಿನಿಂದಾಗಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೇತ್ರಿ ಗೋಲನ್ನು ಹೊಡೆದ ಕಾರಣ ಭಾರತ ಜಯ ಕಾಣುವಂತಾಯಿತು. ಚೇತ್ರಿ ಅವರ ಅಮೋಘ ಹೊಡೆತವನ್ನು ತಡೆಯಲು ಬಾಂಗ್ಲಾ ಗೋಲ್‌ಕೀಪರ್‌ ಹಾರಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಭಾರತ ಮುಂದಿನ ಪಂದ್ಯದಲ್ಲಿ ಮ್ಯಾನ್ಮಾರ್‌ ತಂಡವನ್ನು ಎದುರಿಸಲಿದೆ. ಮ್ಯಾನ್ಮಾರ್‌ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾವನ್ನು 1-0 ಗೋಲಿನಿಂದ ಸೋಲಿಸಿತ್ತು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಗೋಲು ಹೊಡೆಯುವ ಕೆಲವು ಅವಕಾಶ ಲಭಿಸಿತ್ತು. ಸಾಮ್ಯುಯೆಲ್‌ ಕಿನ್ಶಿ ಫ್ರಿ-ಕಿಕ್‌ ಮೂಲಕ ಹೊಡೆದ ಚೆಂಡನ್ನು ಗೋಲ್‌ಕೀಪರ್‌ ಅದ್ಭುತ ರೀತಿಯಲ್ಲಿ ತಡೆದಿದ್ದರೆ ಗುರುಕೀರತ್‌ ಸಿಂಗ್‌ ಅವರ ಹೊಡೆತವು ಗೋಲ್‌ಪೋಸ್ಟ್‌ನ ಬದಿಯಿಂದ ಹೊರಗೆ ಹೋಯಿತು.

Advertisement

Udayavani is now on Telegram. Click here to join our channel and stay updated with the latest news.

Next