Advertisement

Asian Games Football: ಭಾರತಕ್ಕೆ ಹೀನಾಯ ಸೋಲು

10:32 AM Sep 20, 2023 | Team Udayavani |

ಹಾಂಗ್‌ಝೋ: 3ನೇ ದರ್ಜೆಯ ಫ‌ುಟ್‌ ಬಾಲ್‌ ತಂಡದೊಂದಿಗೆ ಏಷ್ಯನ್‌ ಗೇಮ್ಸ್‌ ಗೆ ಪ್ರವೇಶಿಸಿರುವ ಭಾರತ, ಮೊದಲ ಪಂದ್ಯದಲ್ಲೇ ಅವಮಾನಕಾರಿ ಸೋಲನ್ನು ಅನುಭವಿಸಿದೆ.

Advertisement

ಸೋಮವಾರ ರಾತ್ರಿಯಷ್ಟೇ ಚೀನಾ ಪ್ರವೇಶಿಸಿದ ಭಾರತ, ಸಂಪೂ ರ್ಣ ಸುಸ್ತಾ ದಂತಿತ್ತು. ವಿಮಾನ ಪ್ರಯಾ ಣದ ಬಳಲಿಕೆ ಯಲ್ಲಿದ್ದ ಆಟಗಾರರ ನಡುವೆ ಸಮನ್ವಯವೂ ಕಾಣಿಸಲಿಲ್ಲ. ಈ ಎಲ್ಲ ಕಾರಣಗಳಿಂದ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡವೆನಿಸಿಕೊಂಡಿರುವ ಭಾರತ; 1-5 ಗೋಲುಗಳಿಂದ ಎದುರಾಳಿ ಚೀನಾ ವಿರುದ್ಧ ಸೋತುಹೋಯಿತು.

ಪಂದ್ಯದ ಯಾವುದೇ ಹಂತದಲ್ಲೂ ಭಾರತೀಯರಿಗೆ ಹಿಡಿತವಿರಲಿಲ್ಲ. ಚೀನಾ ಪರ ಗಿಯಾವೊ ತಿಯಾನ್ಯಿ (17ನೇ ನಿಮಿಷ), ದಾಯ್‌ ವೀಜುನ್‌ (51ನೇ ನಿಮಿಷ), ತಾವೊ ಖೀಯಾಂಗ್‌ ಲಾಂಗ್‌ (72, 75ನೇ ನಿಮಿಷ), ಹಾವೊ ಫ್ಯಾಂಗ್‌ (90+2) ಗೋಲು ಬಾರಿಸಿದರು. ಪಂದ್ಯದ 45+1ನೇ ನಿಮಿಷದಲ್ಲಿ ಭಾರತದ ಪರ ಕೆ.ಪಿ.ರಾಹುಲ್‌ ಒಂದು ಗೋಲು ಬಾರಿಸಿದರು.

ಚಿನ್ನ ಗೆಲ್ಲುವ ಮೆಚ್ಚಿನ ತಂಡವೆನಿಸಿಕೊಂಡಿರುವ ಭಾರತ ಏಷ್ಯನ್‌ ಗೇಮ್ಸ್‌ ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತುಹೋಗಿದ್ದು ಮುಜುಗರ ತಂದಿದೆ. ಈ ತಂಡ 2ನೇ ಸುತ್ತಿಗೆ ಪ್ರವೇಶಿಸಬೇಕಾದರೆ ಬಾಂಗ್ಲಾದೇಶ ಮತ್ತು ಮಾಯೆನ್ಮಾರ್‌ ತಂಡಗಳನ್ನು ಸೋಲಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next