Advertisement

ಸೈಲಿಂಗ್‌ನಲ್ಲಿ ತೇಲಿ ಬಂತು 3 ಪದಕ

06:00 AM Sep 01, 2018 | |

ಜಕಾರ್ತಾ: ಶುಕ್ರವಾರದ ಏಶ್ಯಾಡ್‌ ಸೈಲಿಂಗ್‌ ಸ್ಪರ್ಧೆಯಲ್ಲಿ ಭಾರತ 3 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಒಂದು ಬೆಳ್ಳಿಯಾದರೆ, ಉಳಿದೆರಡು ಕಂಚಿನ ಪದಕಗಳಾಗಿವೆ. ವನಿತೆಯರ 49ಇಆರ್‌ ಎಫ್ಎಕ್ಸ್‌ ಫೈನಲ್‌ನಲ್ಲಿ ವರ್ಷಾ ಗೌತಮ್‌-ಶ್ವೇತಾ ಶೇರ್ವೆಗಾರ್‌ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದರು. ವನಿತೆಯರ ಓಪನ್‌ ಲೇಸರ್‌ 4.7 ಸ್ಪರ್ಧೆಯಲ್ಲಿ ಹರ್ಷಿತಾ ತೋಮರ್‌ ಕಂಚಿನ ಪದಕ ಜಯಿಸಿದರು.

Advertisement

ಪುರುಷರ 49ಇಆರ್‌ ಸ್ಪರ್ಧೆಯಲ್ಲಿ ವರುಣ್‌ ಥಕ್ಕರ್‌-ಚೆಂಗಪ್ಪ ಗಣಪತಿ ಕೆಲಪಂಡ ಕಂಚಿನ ಪದಕವನ್ನು ತಮ್ಮ ದಾಗಿಸಿಕೊಂಡರು. ಇವರಿಬ್ಬರು 15 ರೇಸ್‌ಗಳ ಬಳಿಕ ಒಟ್ಟು 40 ಅಂಕ ಕಲೆಹಾಕಿದರು. 20ರ ಹರೆಯದ ವರ್ಷಾ ಗೌತಮ್‌-27ರ ಹರೆಯದ ಶ್ವೇತಾ ಶೇರ್ವೆಗಾರ್‌ 15 ರೇಸ್‌ಗಳಲ್ಲಿ ಒಟ್ಟು 40 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾದರು. 16ರ ಹರೆಯದ ಹರ್ಷಿತಾ ತೋಮರ್‌ಗೆ 12 ರೇಸ್‌ಗಳಲ್ಲಿ 62 ಅಂಕ ಲಭಿಸಿತು. 

“ಇದೊಂದು ಅಸಾಮಾನ್ಯ ಅನುಭವ. ದೇಶಕ್ಕಾಗಿ ಪದಕ ತಂದ ಈ ಗಳಿಗೆ ನಿಜಕ್ಕೂ ಸ್ಮರಣೀಯ. ಇದನ್ನು ಬಣ್ಣಿಸಲಾಗುತ್ತಿಲ್ಲ. ನನ್ನ ಪಾಲಿಗೆ ಇದೊಂದು ಕಲಿಕೆಯ ಅನುಭವ ತಂದಿತ್ತ ಕೂಟವಾಗಿದೆ’ ಎಂಬುದಾಗಿ ಹರ್ಷಿತಾ ಹರ್ಷ ವ್ಯಕ್ತಪಡಿಸಿದ್ದಾರೆ. ಹರ್ಷಿತಾ ಆರಂಭದಲ್ಲಿ ಈಜುಪಟುವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next