ಹೊಸದಿಲ್ಲಿ: ವಿಶ್ವಕಪ್‌ನಲ್ಲಿ ಎರಡು ಚಿನ್ನ ಮತ್ತು ವಿಶ್ವ ಕಪ್ ಫೈನಲ್‌ನಲ್ಲಿ ಒಂದು ಬೆಳ್ಳಿಯ ಪದಕ ಗೆದ್ದಿರುವ ಭಾರತದ ಅಭಿಷೇಕ್ ವರ್ಮ ಅವರು ಜಕಾರ್ತಾ ಏಶ್ಯನ್ ಗೇಮ್ಸ್‌ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಫೇವರಿಟ್ ಆಟಗಾರರಾಗಿದ್ದಾರೆ. ಆದರೆ ಈ ಕ್ರೀಡೆಯಲ್ಲಿ ವೈಯಕ್ತಿಕ ಸ್ಪರ್ಧೆ ಇಲ್ಲ. ಹಾಗಾಗಿ ಅವರು ತಂಡ ಮತ್ತು ಮಿಕ್ಸೆಡ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಅಭಿಷೇಕ್ ಅವರು ಏಶ್ಯನ್ ಗೇಮ್ಸ್‌ನಲ್ಲಿ ಎರಡು ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ ಗೇಮ್ಸ್
ನಲ್ಲಿ ಅವರು ಒಂದು ವೈಯಕ್ತಿಕ ಮತ್ತು ಇನ್ನೊಂದು ತಂಡ ವಿಭಾಗದಲ್ಲಿ ಪದಕ ಜಯಿಸಿದ್ದರು. ಭಾರತ ಆರ್ಚರಿಯಲ್ಲಿ ನಾಲ್ಕು ಪದಕ ಪಡೆದಿತ್ತು. ಎಲ್ಲ ಪದಕಗಳು ಕಂಪೌಂಡ್ ವಿಭಾಗದಿಂದ ಬಂದಿದ್ದವು. ರಿಕರ್ವ್ ಬಿಲ್ಗಾರರು ಬರಿಗೈಯಲ್ಲಿ ವಾಪಾಸಾಗಿದ್ದರು.
ಬಿಲ್ಗಾರಿಕೆ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಭಾರತ ಪದಕ ಗೆಲ್ಲುವ ನಿರೀಕ್ಷೆಯಿದೆ. ಆದರೆ ಪದಕ ಬಣ್ಣ ಯಾವುದೆಂದು ಹೇಳುವುದು ಕಷ್ಟ. ಅದು ಸ್ಪರ್ಧೆಯ ದಿನ ಅಲ್ಲಿನ ಪರಿಸ್ಥಿತಿಯನ್ನು ಹೊಂದಿಕೊಂಡಿದೆ ಎಂದು ಅಭಿಷೇಕ್ ಹೇಳಿದರು.
ತಂಡ ವಿಭಾಗದಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿದೆ. ಆದರೆ ನಾವು ಯಾವುದೇ ಒತ್ತಡದಲ್ಲಿಲ್ಲ. ತಂಡ ಮತ್ತು ಮಿಕ್ಸೆಡ್ ಜೋಡಿ ಸ್ಪರ್ಧೆಯಲ್ಲಿ ಪದಕ ಗೆಲ್ಲುವುದಕ್ಕೆ ಗಮನ ಹರಿಸುತ್ತೇವೆ. ಎಲ್ಲ ತಂಡಗಳೂ ಬಲಿಷ್ಠವಾಗಿವೆ. ಅವರಿಗೆ ತೀವ್ರ ಸ್ಪರ್ಧೆ ನೀಡಲು ಬಯಸುತ್ತೇವೆ ಎಂದವರು ತಿಳಿಸಿದರು.
ಭಾರತೀಯ ತಂಡವು ಇಟಲಿಯ ಸರ್ಜಿಯೊ ಪಾಗ್ನಿ ಅವರ ಮಾರ್ಗದರ್ಶನದಲ್ಲಿ 10 ದಿನಗಳ ಕಠಿನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದೆ. ಪಾಗ್ನಿ ಅವರು ಎರಡು ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಪಾಗ್ನಿ ಅವರು ನಮ್ಮ ಆಟದಲ್ಲಿ ಮಹತ್ತರ ಬದಲಾವಣೆ ಮಾಡಲು ಬಯಸಿಲ್ಲ. ಆದರೆ ಉಪಯುಕ್ತ ಮತ್ತು ಸಣ್ಣ ಟಿಪ್ಸ್ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ಅಭಿಷೇಕ್ ನುಡಿದರು.