Advertisement
ಏನಿದು ಸೆಪಕ್ ಟಕ್ರಾ?ವಾಲಿಬಾಲ್ ಅಥವಾ ಬೀಚ್ ವಾಲಿಬಾಲ್ ಅನ್ನು ಹೋಲುವ ಕ್ರೀಡೆ. ಇಲ್ಲಿ ಕೈಯಿಂದ ಚೆಂಡನ್ನು ಮುಟ್ಟಿ ಆಡುವಂತಿಲ್ಲ. ಕಾಲು, ಎದೆ, ತಲೆ ಮತ್ತು ಮಂಡಿಯನ್ನು ಬಳಸಿಯೇ ಆಡಬೇಕು. ಇದಕ್ಕಾಗಿ ಸಿಂಥೆಟಿಕ್ ರಬ್ಬರ್ ಮಿಶ್ರಿತ ಪ್ಲಾಸ್ಟಿಕ್‌ನ ಚೆಂಡು ಬಳಕೆ ಮಾಡಲಾಗುತ್ತದೆ. ಮಲೇಶ್ಯ ಹಾಗೂ ಥಾçಲಂಡ್‌ನಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯ. “ಸೆಪಕ್’ ಎಂದು ಮಲೇಶ್ಯದಲ್ಲಿ ಕರೆಯುತ್ತಾರೆ. ಥಾçಲಂಡ್‌ನಲ್ಲಿ ಇದೇ ಕೂಟವನ್ನು “ಟಕ್ರಾ’ ಎಂದು ಕರೆಯುತ್ತಾರೆ. ಹೀಗಾಗಿ ಎರಡು ದೇಶಗಳು ಕರೆಯುವ ಹೆಸರಿನಿಂದ ಸೆಪಕ್ ಟಕ್ರಾ ಆಗಿದೆ. ಒಲಿಂಪಿಕ್ಸ್ ಕೂಟದಲ್ಲಿ ಈ ಸ್ಪರ್ಧೆಗೆ ಇನ್ನೂ ಮಾನ್ಯತೆ ನೀಡಲಾಗಿಲ್ಲ. 2022ರ ಒಲಿಂಪಿಕ್ಸ್‌ನಲ್ಲಿ ಮಾನ್ಯತೆ ಸಿಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.