Advertisement
ಸೋಮವಾರ ನಡೆದ ಪುರುಷರ ಮಿಡ್ಲ್ ವೇಟ್ ವಿಭಾಗದ ಸ್ಪರ್ಧೆಯಲ್ಲಿ ತನ್ವೀರ್ ಅಹ್ಮದ್ ಅವರ ವಿರುದ್ಧ 5-0 ಅಂಕಗಳಿಂದ ಗೆಲವು ಸಾಧಿಸಿ ಎಂಟರ ಸುತ್ತು ಪ್ರವೇಶಿಸಿದ ವಿಕಾಸ್, ಸತತ 3ನೇ ಏಶ್ಯಾಡ್ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ವಿಕಾಸ್ ಕೃಷ್ಣನ್ 2010ರಲ್ಲಿ ಚಿನ್ನ, 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಬುಧವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಚೀನದ ತೌಹೇಟ್ ಎರ್ಬಿಕ್ ತಂಗ್ಲಾತಿಹಾಕ್ ಅವರನ್ನು ವಿಕಾಸ್ ಎದುರಿಸಲಿದ್ದಾರೆ. ಬಳಿಕ ಅಮಿತ್ ಪಾಂಗಾಲ್ ಮಂಗೋಲಿಯಾದ ಎಕಮಂದಕ್ ಖರು ಅವರನ್ನು 5-0 ಅಂತರದಿಂದ ಉರುಳಿಸಿದರು. ಅಮಿತ್ ಅವರ ಕ್ವಾರ್ಟರ್ ಫೈನಲ್ ಎದುರಾಳಿ ಉತ್ತರ ಕೊರಿಯಾದ ಕಿಮ್ ಜಾಂಗ್ ರಿಯಾಂಗ್. ರಾಷ್ಟ್ರೀಯ ಚಾಂಪಿಯನ್ ಧೀರಜ್ ರಂಗಿ ಮಂಗೋಲಿಯಾದ ನೂರ್ಲಾನ್ ಕೊಬಸೇವ್ ಅವರನ್ನು 3-0 ಅಂಕಗಳಿಂದ ಸೋಲಿಸಿದರು.
56 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಕಂಚು ವಿಜೇತ ಮೊಹ್ಮಮದ್ ಹುಸ್ಸಮುದ್ದೀನ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕಿರ್ಗಿಸ್ಥಾನದ ಎನ್. ಅಮರ್ ಖಾರ್ಕು ಅವರ ವಿರುದ್ಧ 2-3 ಅಂಕಗಳಿಂದ ಸೋತು ಏಶ್ಯಾಡ್‌ನಿಂದ ಹೊರಬಿದ್ದರು.