ದೋಹಾ: ಭಾರತ ತಂಡವು 2023ರ ಎಎಫ್ಸಿ ಏಷ್ಯನ್ ಕಪ್ ಫುಟ್‌ಬಾಲ್ ಕೂಟದಲ್ಲಿ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯ, ಸಿರಿಯ ಮತ್ತು ಉಜ್ಬೆಕಿಸ್ಥಾನ ಜತೆ ಕಠಿನ “ಬಿ” ಬಣದಲ್ಲಿ ಸ್ಥಾನ ಪಡೆದಿದೆ.
ಕತಾರ್ ಒಪೆರಾ ಹೌಸ್‌ನಲ್ಲಿ ಈ ಕೂಟದ ಡ್ರಾವು ಗುರುವಾರ ನಡೆಯಿತು. ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿರುವ ಬ್ಲೂ ಟೈಗರ್ ತಂಡವು ಏಷ್ಯನ್ ಕಪ್‌ನನಲ್ಲಿ ಐದನೇ ಬಾರಿ ಆಡುತ್ತಿದೆ. ಭಾರತದ ಎದುರಾಳಿಯಾಗಿರುವ ಆಸ್ಟ್ರೇಲಿಯ ವಿಶ್ವದ 29ನೆ ರ್‍ಯಾಂಕಿನ ತಂಡವಾಗಿದೆ. ಇನ್ನುಳಿದ ಉಜ್ಬೆಕಿಸ್ಥಾನ 74ನೇ ಮತ್ತು ಸಿರಿಯ 90ನೇ ಸ್ಥಾನ ಹೊಂದಿದೆ.
ಡ್ರಾ ಸಮಾರಂಭದಲ್ಲಿ ಅ. ಭಾ. ಫುಟ್‌ಬಾಲ್ ಫೆಡರೇಶನ್‌ನ ಅಧ್ಯಕ್ಷ ಕಲ್ಯಾಣ್ ಚೌಬೆ, ಮುಖ್ಯ ಕೋಚ್ ಐಗರ್ ಸ್ಟಿಮ್ಯಾಕ್ ಮತ್ತು ಮೇಮೋಲ್ ರಾಕಿ ಉಪಸ್ಥಿತರಿದ್ದರು.