ಹೊಸದಿಲ್ಲಿ: ಬಿಸಿಸಿಐ ಕಾರ್ಯ ದರ್ಶಿ ಜಯ್ ಶಾ ಸತತ 3ನೇ ವರ್ಷ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ಎಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಯ್ ಶಾ ಅವರ ಮುಂದು ವರಿಕೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವ ಸೂಚಿಸಿದರು. ಇದನ್ನು ಎಸಿಸಿಯ ಎಲ್ಲ ಸದಸ್ಯರೂ ಸರ್ವಾನು ಮತ ದಿಂದ ಬೆಂಬಲಿಸಿದರು.
ಜಯ್ ಶಾ 2021ರಲ್ಲಿ ಬಾಂಗ್ಲಾದೇಶದ ನಜ್ಮುಲ್ ಹಸನ್ ಅವರಿಂದ ಎಸಿಸಿ ಅಧ್ಯಕ್ಷತೆಯ ಅಧಿಕಾರ ಪಡೆದಿದ್ದರು. ಅಂದು ಈ ಹುದ್ದೆಗೆ ನೇಮಕಗೊಂಡ ಅತೀ ಕಿರಿಯ ಆಡಳಿತಗಾರನೆಂಬ ಹಿರಿಮೆ ಶಾ ಅವರ ದಾಗಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಏಷ್ಯಾದ್ಯಂತ ಕ್ರಿಕೆಟ್ ಅಭಿವೃದ್ಧಿಪಡಿಸುವಲ್ಲಿ ಹಾಗೂ ಉತ್ತೇ ಜಿಸುವಲ್ಲಿ ಶಾ ಯಶಸ್ವಿಯಾಗಿ ದ್ದರು. 2022ರಲ್ಲಿ ಹಾಗೂ 2023ರಲ್ಲಿ ಕ್ರಮವಾಗಿ ಟಿ20 ಹಾಗೂ ಏಕದಿನ ಮಾದರಿ ಯಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋ ಜಿಸಲಾಗಿತ್ತು.
ಕ್ರಿಕೆಟ್ ಉತ್ತೇಜನ
“ನನ್ನ ಮೇಲೆ ನಂಬಿಕೆ ಇರಿಸಿದ ಎಸಿಸಿಯ ಎಲ್ಲ ಸದಸ್ಯರಿಗೂ ಧನ್ಯವಾದಗಳು. ಏಷ್ಯಾ ಮಟ್ಟದಲ್ಲಿ ಕ್ರಿಕೆಟನ್ನು ಉತ್ತೇಜಿಸುವ ಕೆಲಸ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಗಬೇಕಿದೆ. ಅದು ಈ ಬಾರಿಯ ಕಾರ್ಯಾವಧಿಯಲ್ಲಿ ಸಾಕಾರಗೊಳ್ಳಲಿದೆ ಎಂಬ ವಿಶ್ವಾಸ ನನ್ನದು. ವನಿತಾ ಕ್ರಿಕೆಟ್ ಪ್ರಗತಿಯೂ ನಮ್ಮ ಪ್ರಮುಖ ಗುರಿ ಆಗಿರಲಿದೆ’ ಎಂಬುದಾಗಿ ಜಯ್ ಶಾ ಹೇಳಿದರು.