Advertisement

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ: ಭಾರತದ ನೂತನ ಹಾಕಿ ಋತು ಆರಂಭ

11:21 PM Dec 13, 2021 | Team Udayavani |

ಢಾಕಾ: ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಪದಕ ಬರಗಾಲವನ್ನು ನೀಗಿಸಿಕೊಂಡ ಖುಷಿಯಲ್ಲಿರುವ ಭಾರತೀಯ ಹಾಕಿ ತಂಡ ನೂತನ ಋತುವಿನ ಆರಂಭಕ್ಕೆ ಸಜ್ಜಾಗಿದೆ. ಮಂಗಳವಾರ ಢಾಕಾದಲ್ಲಿ “ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ’ ಹಾಕಿ ಪಂದ್ಯಾವಳಿ ಆರಂಭವಾಗಲಿದ್ದು, ಮನ್‌ಪ್ರೀತ್‌ ಸಿಂಗ್‌ ಸಾರಥ್ಯದ ಭಾರತ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

Advertisement

ಕೂಟದ ಆರಂಭದ ದಿನವೇ ಕೊರಿಯಾ ಸವಾಲನ್ನು ಭಾರತ ಎದುರಿಸಲಿದೆ. ಮರುದಿನ ಆತಿಥೇಯ ಬಾಂಗ್ಲಾದೇಶ ವಿರುದ್ಧ ಆಡಲಿದೆ (ಡಿ. 15). ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧದ ಬಹು ನಿರೀಕ್ಷೆಯ ಮುಖಾಮುಖಿ ಡಿ. 17ರಂದು ಏರ್ಪಡಲಿದೆ. ಡಿ. 19ರಂದು ಏಶ್ಯನ್‌ ಚಾಂಪಿಯನ್‌ ಜಪಾನ್‌ ವಿರುದ್ಧ ಸೆಣಸಲಿದೆ.

ಮೇಲುಗೈ ವಿಶ್ವಾಸ
“ಕೊರಿಯಾ ಅತ್ಯುತ್ತಮ ತಂಡ. ನಮ್ಮ ಆಕ್ರಮಣವನ್ನು ನಿಯಂತ್ರಿಸುವ ಸಾಮರ್ಥ್ಯ ಅವರಲ್ಲಿದೆ. ಇಲ್ಲೇ ನಡೆದ 2017ರ ಏಶ್ಯ ಕಪ್‌ ಕೂಟದಲ್ಲಿ ನಾವು ಕೊರಿಯಾ ವಿರುದ್ಧ 1-1 ಡ್ರಾ ಸಾಧಿಸಿದ್ದೆವು. ಆದರೆ ನಮ್ಮ  ಕಾರ್ಯತಂತ್ರ ವನ್ನು ಯಶಸ್ವಿ ಯಾಗಿ ಅಳವಡಿಸಿದರೆ ಮೇಲುಗೈ ಸಾಧಿಸ ಬಲ್ಲೆವು’ ಎಂಬುದು ನಾಯಕ ಮನ್‌ಪ್ರೀತ್‌ ಸಿಂಗ್‌ ಅಭಿಪ್ರಾಯ.

ಇದನ್ನೂ ಓದಿ:ಚಿನ್ನ ಗೆದ್ದ ಅಜಯ್‌ ಸಿಂಗ್‌ ಕಾಮನ್ವೆಲ್ತ್‌ ಗೇಮ್ಸ್‌ಗೆ ಆಯ್ಕೆ

“ಟೋಕಿಯೊ ಒಲಿಂಪಿಕ್ಸ್‌ ಬಳಿಕ ನಾವು ಪಾಲ್ಗೊಳ್ಳುತ್ತಿರುವ ಮೊದಲ ಪಂದ್ಯಾವಳಿ ಇದಾಗಿದೆ. ನೂತನ ಋತುವನ್ನು ಉತ್ತಮ ರೀತಿಯಲ್ಲಿ ಆರಂಭಿಸಬೇಕು. ಆಗಷ್ಟೇ ನಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ’ ಎಂದರು.
ತಂಡದ ಯುವ ಆಟಗಾರರ ಕುರಿತು ಮಾತಾಡಿದ ಮನ್‌ಪ್ರೀತ್‌, “ಇವರೆಲ್ಲ ಕಳೆದ ಎರಡು ವರ್ಷಗಳಿಂದ ಕಾಯು ತ್ತಿದ್ದರು. ಈಗ ಅವಕಾಶ ಒದಗಿ ಬಂದಿದೆ. ಇವರನ್ನೂ ಒಳಗೊಂಡಂತೆ ಮುಂದಿನ ಒಲಿಂಪಿಕ್ಸ್‌ಗೆ ಸಶಕ್ತ ತಂಡವನ್ನು ಕಟ್ಟುವುದು ನಮ್ಮ ಯೋಜನೆ’ ಎಂದರು.

Advertisement

3 ಬಾರಿಯ ಚಾಂಪಿಯನ್‌
ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಯಲ್ಲಿ ಭಾರತ 3 ಸಲ ಪ್ರಶಸ್ತಿ ಎತ್ತಿದೆ. ಕಳೆದ 2016 ಮತ್ತು 2018ರ ಆವೃತ್ತಿಯ ಚಾಂಪಿಯನ್‌ ಕೂಡ ಹೌದು. 2018ರ ಮಸ್ಕತ್‌ ಫೈನಲ್‌ ವೇಳೆ ಮಳೆ ಬಂದುದರಿಂದ ಭಾರತ-ಪಾಕಿಸ್ಥಾನವನ್ನು ಜಂಟಿ ಚಾಂಪಿ ಯನ್‌ ಎಂದು ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next