Advertisement
ಇಲ್ಲಿನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೋರಾಟದಲ್ಲಿ ಭಾರತವೇ ಫೇವರಿಟ್ ತಂಡವಾಗಿದ್ದರೂ ಎದುರಾಳಿಯನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಲೀಗ್ ಹಂತದಲ್ಲಿ ಆಡಿದ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಭಾರತವು ಇನ್ನೊಂದು ಪಂದ್ಯದಲ್ಲಿ ಡ್ರಾ ಸಾಧಿಸಿ ಅಜೇಯ ಸಾಧನೆ ಮಾಡಿದೆಯಲ್ಲದೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಭಾರತವು ದಾಖಲೆ ನಾಲ್ಕನೇ ಬಾರಿ ಈ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.
Related Articles
Advertisement
ಲೀಗ್ ಹಂತದಲ್ಲಿ ಭಾರತ ಒಟ್ಟಾರೆ 20 ಗೋಲುಗಳನ್ನು ದಾಖಲಿಸಿದೆ. ಆದರೆ ಜಪಾನ್ ವಿರುದ್ಧ ಗೋಲು ದಾಖಲಿಸುವ ಹಲವು ಅವಕಾಶವನ್ನು ಕಳೆದುಕೊಂಡಿತ್ತು. ಕ್ರೆಗ್ ಫುಲ್ಟನ್ ನಾಯಕತ್ವದ ತಂಡವು ಜಪಾನ್ ವಿರುದ್ಧ 15 ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದರೂ ಒಮ್ಮೆ ಮಾತ್ರ ಗೋಲು ದಾಖಲಿಸಲು ಯಶಸ್ವಿಯಾಗಿತ್ತು. ಇದೀಗ ತಂಡವು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಲು ಪ್ರಯತ್ನಿಸಬೇಕಾಗಿದೆ.ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವನ್ನು 4-0 ಗೋಲುಗ ಳಿಂದ ಸೋಲಿಸಿರುವುದು ಭಾರತದ ಉತ್ಸಾಹವನ್ನು ಹೆಚ್ಚಿಸಿದೆ. ಪಂದ್ಯದ 4 ಕ್ವಾರ್ಟರ್ ಹಂತದಲ್ಲಿ ಸ್ಥಿರ ನಿರ್ವಹಣೆ ನೀಡಿ ಭಾರತ ಮೇಲುಗೈ ಸಾಧಿಸಿತ್ತು. ಅದೇ ಉತ್ಸಾಹದಲ್ಲಿ ಭಾರತವು ಜಪಾನ್ ವಿರುದ್ಧ ಆಡಬೇಕಾಗಿದೆ.