Advertisement
ಇದರೊಂದಿಗೆ ಕಳೆದ ಸಲದ ಜಂಟಿ ಚಾಂಪಿಯನ್ ತಂಡಗಳೆರಡೂ ಮಾಜಿ ಎನಿಸಿಕೊಂಡವು. ಹಾಗೆಯೇ ಭಾರತ, ಪಾಕಿಸ್ಥಾನ ತಂಡಗಳಿಲ್ಲದ ಮೊದಲ ಫೈನಲ್‌ಗೆ ಎಸಿಟಿ ಟೂರ್ನಿ ಸಾಕ್ಷಿಯಾಗಲಿದೆ. ಇತ್ತಂಡಗಳಿನ್ನು ಬುಧವಾರ 3ನೇ ಸ್ಥಾನಕ್ಕೆ ಸೆಣಸಾಡಲಿವೆ.
ಜಪಾನ್ ಸೇಡು ತೀರಿಸಿಕೊಳ್ಳುವ ಇರಾದೆಯಿಂದಲೇ ಆಡಲಿಳಿದು ಕನಸಿನ ಆರಂಭವನ್ನೇ ಪಡೆಯಿತು. ಎರಡೇ ನಿಮಿಷಗಳಲ್ಲಿ 2 ಗೋಲು ಸಿಡಿಸಿ ಭಾರತವನ್ನು ಬೆಚ್ಚಿ ಬೀಳಿಸಿತು. ಶೋಟ ಯಮಾಡ ಮತ್ತು ರೈಕಿ ಫುಜಿಶಿಮ ಈ ಮುನ್ನಡೆ ಕೊಡಿಸಿದರು. ಬಳಿಕ ಯೊಶಿಕಿ ಕಿರಿಶಿಟ (14ನೇ ನಿಮಿಷ), ಕೋಸಿ ಕವಾಬೆ (35ನೇ ನಿಮಿಷ) ಮತ್ತು ರಿಯೋಮ ಊಕ (41ನೇ ನಿಮಿಷ) ಗೋಲು ಬಾರಿಸಿದರು.
Related Articles
Advertisement
ಭಾರತದ ಉಳಿದೆರಡು ಗೋಲುಗಳನ್ನು ಹರ್ಮನ್‌ಪ್ರೀತ್ ಸಿಂಗ್ (43ನೇ ನಿಮಿಷ) ಮತ್ತು ಹಾರ್ದಿಕ್ ಸಿಂಗ್ (58ನೇ ನಿಮಿಷ) ಹೊಡೆದರು.ಬುಧವಾರದ ಫೈನಲ್‌ನಲ್ಲಿ ಜಪಾನ್-ಕೊರಿಯಾ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಬ್ಯಾಟಿಂಗ್‌ನತ್ತ ದ್ರಾವಿಡ್ ವಿಶೇಷ ಗಮನ
ಪಾಕ್ ಎದುರು ಗೆದ್ದ ಕೊರಿಯಾಏಶ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 6-5 ಅಂತರದಿಂದ ಮಣಿಸಿದ ಕೊರಿಯಾ ಫೈನಲ್ ಪ್ರವೇಶಿಸಿದೆ. ಪಂದ್ಯದ ಆರಂಭದಿಂದ ಅಂತಿಮ ಕ್ಷಣದ ವರೆಗೆ ಎರಡೂ ತಂಡಗಳು ಜಿದ್ದಿಗೆ ಬಿದ್ದವರಂತೆ ಹೋರಾಡಿ ಗೋಲು ದಾಖಲಿಸುತ್ತಲೇ ಸಾಗಿದವು.ಅಂತಿಮ ಕ್ವಾರ್ಟರ್‌ನಲ್ಲಿ ಕೆಲವೇ ಕ್ಷಣ ಬಾಕಿ ಇರುವಾಗ ಪಂದ್ಯ 5-5 ಸಮಬಲದಲ್ಲಿತ್ತು. ಆಗ ಕೊರಿಯಾ ಗೆಲುವಿನ ಗೋಲು ಬಾರಿಸಿ ಮೆರೆದಾಡಿತು!