Advertisement

ಕೊರಿಯಾ, ಮಕಾವು  ಓಪನ್‌ ಬ್ಯಾಡ್ಮಿಂಟನ್‌ ರದ್ದು 

01:52 AM Aug 12, 2021 | Team Udayavani |

ಹೊಸದಿಲ್ಲಿ: ಕೋವಿಡ್‌-19 ಕಾರಣದಿಂದ ಕೊರಿಯಾ ಓಪನ್‌ ಮತ್ತು ಮಕಾವು ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯನ್ನು ಬಿಡಬ್ಲ್ಯುಎಫ್ ರದ್ದುಗೊಳಿಸಿದೆ. ಜತೆಗೆ ಚೀನದಲ್ಲಿ ನಡೆಯಬೇಕಿದ್ದ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಕೂಟವನ್ನು ಮುಂದೂಡಿದೆ.

Advertisement

ಆ. 31ರಿಂದ ಸೆ. 5ರ ತನಕ ನಡೆಯಬೇಕಿದ್ದ ಸೂಪರ್‌ 5000 ಸ್ಪರ್ಧೆಯಾದ ಕೊರಿಯಾ ಓಪನ್‌ ನೂತನ ಬಿಡಬ್ಲ್ಯುಎಫ್  ವರ್ಲ್ಡ್ ಟೂರ್‌ ಋತುವಿಗೆ ಚಾಲನೆ ನೀಡಬೇಕಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ಆಲ್‌ ಇಂಗ್ಲೆಂಡ್‌ ಕೂಟದ ಬಳಿಕ ಯಾವುದೇ ಬ್ಯಾಡ್ಮಿಂಟನ್‌ ಪಂದ್ಯಾವಳಿ ನಡೆದಿರಲಿಲ್ಲ.

ಮಕಾವು ಓಪನ್‌ ವರ್ಷಾಂತ್ಯದ ಬ್ಯಾಡ್ಮಿಂಟನ್‌ ಪಂದ್ಯಾವಳಿಯಾಗಿದ್ದು, ನ. 2ರಿಂದ 7ರ ತನಕ ನಡೆಯಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next