Advertisement

Asian Athletics; ಭಾರತಕ್ಕೆ 3 ಚಿನ್ನ:100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿಗೆ ಮೊದಲ ಚಿನ್ನ

11:31 PM Jul 13, 2023 | Team Udayavani |

ಬ್ಯಾಂಕಾಕ್‌: ಏಷ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ದ್ವಿತೀಯ ದಿನ ಭಾರತ ಮೂರು ಚಿನ್ನ ಗೆದ್ದ ಸಾಧನೆ ಮಾಡಿದೆ. ಪ್ರಮುಖ ಕೂಟವೊಂದರಲ್ಲಿ ಜ್ಯೋತಿ ಯರಾಜಿ ಮೊದಲ ಬಾರಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿ ಸಂಭ್ರಮಿಸಿದರು. ವನಿತೆಯರ 100 ಮೀ. ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ ಅವರು 13.09 ಸೆ.ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

Advertisement

ಪುರುಷರ 1500 ಮೀ.ನಲ್ಲಿ ಅಜಯ್‌ ಕುಮಾರ್‌ ಸರೋಜ್‌ ಮತ್ತು ಟ್ರಿಪಲ್‌ ಜಂಪ್‌ನಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ ಅಬ್ದುಲ್ಲ ಅಬೂಬಕರ್‌ ಚಿನ್ನ ಗೆದ್ದಿದ್ದಾರೆ. ಭಾರತೀಯರು ಗುರುವಾರ ಶ್ರೇಷ್ಠ ನಿರ್ವಹಣೆ ನೀಡಿದ್ದು ಮೂರು ಚಿನ್ನವಲ್ಲದೇ ಒಂದು ಕಂಚು ಜಯಿಸಿದ್ದಾರೆ. ವನಿತೆಯರ 400 ಮೀ.ನಲಿಲ ಐಶ್ವರ್ಯಾ ಮಿಶ್ರಾ 53.07 ಸೆ.ನಲ್ಲಿ ಗುರಿ ತಲುಪಿ ಕಂಚು ಪಡೆದರು.

23ರ ಹರೆಯದ ಜ್ಯೋತಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಮಳೆಯಿಂದ ಒದ್ದೆಯಾಗಿದ್ದ ಟ್ರ್ಯಾಕ್‌ನಲ್ಲಿ ಓಡಿದ ಅವರು ಜಪಾನಿನ ಸ್ಪರ್ಧಿ ಗಳನ್ನು ಹಿಂದಿಕ್ಕಿ ಚಿನ್ನ ಪಡೆದರು. ಜಪಾನಿಯ ಅಸುಕಾ ಬೆಳ್ಳಿ, ಮಸುಮಿ ಕಂಚು ಪಡೆದರು.

ಪುರುಷರ 1500 ಮೀ.ನಲ್ಲಿ 26ರ ಹರೆಯದ ಸರೋಜ್‌ ಅಮೋಘ ನಿರ್ವಹಣೆ ನೀಡಿ ಗಮನ ಸೆಳೆದರು. ಆರಂಭದಲ್ಲಿ ಬಹಳಷ್ಟು ಹಿಂದೆ ಇದ್ದ ಅವರು ಕೊನೆಕ್ಷಣದಲ್ಲಿ ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿ 3:41.51 ಸೆ.ನಲ್ಲಿ ಗುರಿ ತಲುಪಿ ಚಿನ್ನ ಪಡೆದರು. ಮೂರನೇ ಚಿನ್ನ ಗೆದ್ದ ಅಬ್ದುಲ್ಲ ಅಬೂಬಕರ್‌ ಅವರದ್ದು ಈ ಋತುವಿನ ಶ್ರೇಷ್ಠ ನಿರ್ಶಹಣೆಯಾಗಿದೆ. ಅವರು 16.92 ಮೀ. ದೂರ ಹಾರಿ ಚಿನ್ನ ಗೆದ್ದರೆ ಜಪಾನಿನ ಕೆಹಟ ಹಿಕಾರು ಬೆಳ್ಳಿ (17.73 ಮೀ.) ಮತ್ತು ಕೊರಿಯದ ಜಾಂಗ್‌ವೂ ಕಿಮ್‌ ಕಂಚು (16.59 ಮೀ.) ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next