Advertisement
ವನಿತಾ ವಿಭಾಗದ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಪುರುಷರ ತಂಡ ವಿಭಾಗದಲ್ಲಿ ಸೌರಭ್ ಚೌಧರಿ ಅವರನ್ನೊಳಗೊಂಡ ಭಾರತ ತಂಡ ಸ್ವರ್ಣ ಪದಕಕ್ಕೆ ಕೊರಳೊಡ್ಡಿದೆ. ಮಿಕ್ಸೆಡ್ ವಿಭಾಗದಲ್ಲಿ ನಿರಾಸೆ ಮೂಡಿಸಿದ್ದ ಅಭಿಷೇಕ್ ವರ್ಮ ವೈಯಕ್ತಿಕ ವಿಭಾಗದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.
ಅರ್ಹತಾ ಸುತ್ತಿನಲ್ಲಿ 600 ಅಂಕಗಳಲ್ಲಿ 575 ಅಂಕ ಗಳಿಸಿದ ಮನು ಭಾಕರ್ ದ್ವಿತೀಯ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮನು 239 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ಹಾಂಕಾಂಗ್‌ನ ಶಿಂಗ್ ಹೊ ಚಿಂಗ್ ಬೆಳ್ಳಿ (237.9), ಯುಎಇಯ ವಫಾ ಅಲಾಲಿ ಕಂಚಿನ ಪದಕ ಜಯಿಸಿದರು. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಸ್ಪರ್ಧಿ ಶ್ರೀ ನಿವೇತಾ 6ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ತಂಡ ವಿಭಾಗದ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಒಲಿಯಿತು.
Related Articles
ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಮೂವರು ಶೂಟರ್‌ಗಳು ಫೈನಲ್ ಪ್ರವೇಶಿಸಿದರೂ ಪದಕ ಜಯಿಸಿದ್ದು ಒಬ್ಬರು ಮಾತ್ರ. ಅರ್ಹತಾ ಸುತ್ತಿನಲ್ಲಿ ಸೌರಭ್ ಚೌಧರಿ 587 ಅಂಕ ಪಡೆದು ಅಗ್ರಸ್ಥಾನಿಯಾಗಿದ್ದರು. ರವೀಂದರ್ 4ನೇ ಸ್ಥಾನ (578 ಅಂಕ) ಮತ್ತು ಅಭಿಷೇಕ್ ವರ್ಮ 5ನೇ ಸ್ಥಾನ ಪಡೆದು (577 ಅಂಕ) ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ಸೌರಭ್ ಅಗ್ರ 3ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಅಭಿಷೇಕ್ ವರ್ಮ ಕೇವಲ 0.2 ಅಂಕಗಳ ಅಂತರದಲ್ಲಿ ಚಿನ್ನದ ಪದಕ ತಪ್ಪಿಸಿಕೊಂಡು ಬೆಳ್ಳಿಗೆ ತೃಪ್ತರಾದರು (240.7). ಕೊರಿಯದ ಮೊಸೆ ಕಿಮ್ ಚಿನ್ನದ ಪದಕ (240. 9), ಕೊರಿಯದ ಮತ್ತೋರ್ವ ಆಟಗಾರ ತೆಯಿಹ್ವಾನ್ ಲೀ ಕಂಚಿನ ಪದಕ ಜಯಿಸಿದರು. ರವೀಂದರ್ 7ನೇ ಸ್ಥಾನಿಯಾದರು.
Advertisement
ತಂಡ ವಿಭಾಗದಲ್ಲಿ ಚಿನ್ನಪುರುಷರ ವೈಯಕ್ತಿಕ ವಿಭಾಗದಲ್ಲಿ ನಿರಾಸೆ ಮೂಡಿಸಿದ ಭಾರತದ ಸೌರಭ್, ಅಭಿಷೇಕ್, ರವೀಂದರ್ ಜೋಡಿ ಇದೇ ಸ್ಪರ್ಧೆಯ ತಂಡ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕೊರಿಯಾ ತಂಡವನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ (1,742 ಅಂಕ).