Advertisement

ಏಷ್ಯನ್‌ ಏರ್‌ಗನ್‌: ಭಾರತಕ್ಕೆ 25 ಚಿನ್ನ

10:38 PM Nov 18, 2022 | Team Udayavani |

ಹೊಸದಿಲ್ಲಿ: ದಕ್ಷಿಣ ಕೊರಿಯಾದಲ್ಲಿ ನಡೆದ 15ನೇ ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 25 ಚಿನ್ನದ ಪದಕಗಳನ್ನು ಗೆದ್ದು ಪ್ರಭುತ್ವ ಸಾಧಿಸಿದೆ. ಕೂಟದ ಅಂತಿಮ ದಿನವಾದ ಶುಕ್ರವಾರ ಭಾರತ 2 ಚಿನ್ನಕ್ಕೆ ಗುರಿ ಇರಿಸಿತು.

Advertisement

ಮನು ಬಾಕರ್‌-ಸಮ್ರಾಟ್‌ ರಾಣಾ ಜೂನಿಯರ್‌ ವಿಭಾಗದ 10 ಮೀ. ಏರ್‌ ಪಿಸ್ತೂಲ್‌ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ಹಾಗೂ ರಿದಮ್‌ ಸಂಗ್ವಾನ್‌-ವಿಜಯವೀರ್‌ ಸಿಧು ಇದೇ ಸ್ಪರ್ಧೆಯ ಸೀನಿಯರ್‌ ವಿಭಾಗದಲ್ಲಿ ಬಂಗಾರ ಗೆದ್ದರು.

ಮನು ಬಾಕರ್‌-ಸಮ್ರಾಟ್‌ ರಾಣಾ ಫೈನಲ್‌ನಲ್ಲಿ ಉಜ್ಬೆಕಿಸ್ಥಾನದ ನಿಗಿನಾ ಸೈಧ್ಕುಲೋವಾ-ಮುಹಮ್ಮದ್‌ ಕಮಲೋವ್‌ ವಿರುದ್ಧ 17-3 ಅಂತರದ ಭಾರೀ ಗೆಲುವು ಒಲಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಉಜ್ಬೆಕಿಸ್ಥಾನದ ಜೋಡಿ ಪ್ರಥಮ, ಭಾರತದ ಜೋಡಿ ದ್ವಿತೀಯ ಸ್ಥಾನಿಯಾಗಿತ್ತು (579-578). ಕಳೆದ 8 ದಿನಗಳ ಕಾಲ ಸಾಗಿದ ಈ ಕೂಟದ 28 ವಿಭಾಗಗಳ ಸ್ಪರ್ಧೆಯಲ್ಲಿ ಭಾರತ 25ರಲ್ಲಿ ಮೇಲುಗೈ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next