Advertisement
ಚೈನೀಸ್ ತೈಪೆಯಲ್ಲಿ ನಡೆದ ಕೂಟದ ಅಂತಿಮ ದಿನವಾದ ಸೋಮವಾರ ಜೂನಿಯರ್ ವಿಭಾಗದ ಸ್ಪರ್ಧೆಯಲ್ಲಿ ಯಶ್ ವರ್ಧನ್, ಶ್ರೇಯಾ ಅಗರ್ವಾಲ್ ತಲಾ 3 ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.
Related Articles
ವನಿತಾ ಜೂನಿಯರ್ ವಿಭಾಗದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಚಿನ್ನ ಮತ್ತು ಕಂಚಿನ ಪದಕ ಜಯಿಸಿದರು. 252.5 ಅಂಕಗಳಿಸಿದ ಶ್ರೇಯಾ ಅಗರ್ವಾಲ್ ಚಿನ್ನ, ಮೆಹುಲಿ ಘೋಶ್ 228. 3 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಕವಿ ಚಕ್ರವರ್ತಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ತಂಡ ವಿಭಾಗದಲ್ಲಿ ಶ್ರೇಯಾ, ಮೆಹುಲಿ ಮತ್ತು ಕವಿ ಅವರನ್ನೊಳಗೊಂಡ ಭಾರತ ತಂಡ ಚಿನ್ನ ಜಯಿಸಿತು.
Advertisement
ಒಟ್ಟು 25 ಪದಕ ಗೆದ್ದ ಭಾರತಮಾರ್ಚ್ 27 ರಂದು ಆರಂಭವಾದ ಈ ಕೂಟದ ಹಿರಿಯರ ಮತ್ತು ಕಿರಿಯರ ವಿಭಾಗ ಎರಡಲ್ಲೂ ಭಾರತದ ಶೂಟರ್‌ಗಳು ಅಮೋಘ ಸಾಧನೆಗೈದರು. 6 ದಿನಗಳ ಕಾಲ ನಡೆದ ಈ ಕೂಟದಲ್ಲಿ ಭಾರತೀಯ ಶೂಟರ್‌ಗಳು 16 ಚಿನ್ನ, 5 ಬೆಳ್ಳಿ ಮತ್ತು 4 ಕಂಚಿನ ಪದಕ ಸಹಿತ ಒಟ್ಟು 25 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿ ಕೂಟವನ್ನು ಮುಗಿಸಿದರು. ಭಾರತದ ಶೂಟರ್‌ಗಳಿನ್ನು ಎಪ್ರಿಲ್ 5ರಂದು ಆರಂಭವಾಗಲಿರುವ ಐಎಸ್‌ಎಸ್‌ಎಫ್ ಶಾಟ್‌ಗನ್ ವಿಶ್ವಕಪ್ 2ನೇ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.